Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿ ಜಯಲಲಿತಾ ಜೀವನಕತೆಯಲ್ಲಿ ನಟಿಸುವ ಹಂಬಲವಿದೆಯಂತೆ ಈ ನಟಿಗೆ

ಮುಖ್ಯಮಂತ್ರಿ ಜಯಲಲಿತಾ ಜೀವನಕತೆಯಲ್ಲಿ ನಟಿಸುವ ಹಂಬಲವಿದೆಯಂತೆ ಈ ನಟಿಗೆ
ಚೆನ್ನೈ , ಗುರುವಾರ, 2 ಆಗಸ್ಟ್ 2018 (07:27 IST)
ಚೆನ್ನೈ : ನಟಿ ತ್ರಿಶಾ ಅವರಿಗೆ  ತಮಿಳುನಾಡಿನ ಪ್ರಸಿದ್ಧ ರಾಜಕಾರಣಿಯೊಬ್ಬರ ಜೀವನಕತೆಯಲ್ಲಿ ನಟಿಸುವ ಹಂಬಲವಿದೆಯಂತೆ.


ತಮಿಳುನಾಡಿನ ಆ ಪ್ರಸಿದ್ಧ ರಾಜಕಾರಣಿ ಬೇರೆ ಯಾರು ಅಲ್ಲ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ. ಹೌದು. ನಟಿ ತ್ರಿಶಾ  ಈ ವಿಚಾರವನ್ನು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


‘ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಜೀವನಕತೆಯಲ್ಲಿ ನಟಿಸುವ ಅವಕಾಶ ಸಿಕ್ಕಿದರೆ ನಾನು ನಿಜಕ್ಕೂ ಅದೃಷ್ಟವಂತೆ. ಒಂದು ವೇಳೆ ಜಯಲಲಿತಾ ಅವರ ಜೀವನಕತೆ ಚಿತ್ರವಾಗುದೇಯಾದರೆ. ಜಯಲಲಿತಾ ಪಾತ್ರದಲ್ಲಿ ನಟಿಸಲು ನಾನು ಉತ್ಸುಕಳಾಗಿದ್ದೇನೆ’ ಎಂದು ಹೇಳಿದ್ದಾರೆ.


‘ನಾನು ಚೆನ್ನೈನಲ್ಲಿ ಓದಿದವಳು. ನಾನಾಗ 10 ವರ್ಷ ಪ್ರಾಯದವಳಿರಬಹುದು. ಒಂದು ದಿನ ಜಯಲಲಿತಾ ಅವರು ನಮ್ಮ ಶಾಲೆಗೆ ಮುಖ್ಯಅತಿಥಿಯಾಗಿ ಬಂದಿದ್ದರು. ನಾನು ಅದೇ ಮೊದಲ ಬಾರಿಗೆ ಅವರನ್ನು ನೋಡಿದ್ದು, ಅಂದಿನಿಂದ ನನಗೆ ಜಯಲಲಿತಾ ಎಂದರೆ ವಿಪರೀತ ಇಷ್ಟ’ ಎಂದಿದ್ದಾರೆ ತ್ರಿಶಾ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೈರಾ ನರಸಿಂಹ ರೆಡ್ಡಿ ಚಿತ್ರದ ಶೂಟಿಂಗ್ ಸೆಟ್ ಅನ್ನು ಆದಾಯ ಇಲಾಖೆ ಅಧಿಕಾರಿಗಳು ಧ್ವಂಸಗೊಳಿಸಿದ್ಯಾಕೆ?