Select Your Language

Notifications

webdunia
webdunia
webdunia
webdunia

ಆ ಮಾರಿಯಮ್ಮಗೆ ಜನರು ಹರಕೆ ತೀರಿಸಿದ್ದು ಹೇಗೆ ಗೊತ್ತಾ?

ಆ ಮಾರಿಯಮ್ಮಗೆ ಜನರು ಹರಕೆ ತೀರಿಸಿದ್ದು ಹೇಗೆ ಗೊತ್ತಾ?
ಆನೇಕಲ್ , ಗುರುವಾರ, 19 ಜುಲೈ 2018 (20:22 IST)
ಅಲ್ಲಿನ ಭಕ್ತರು ಹರಕೆಯ ನೆಪದಲ್ಲಿ ಮಾಡುತ್ತಿರುವುದು ಮೂಢನಂಬಿಕೆಯೋ..ಇಲ್ಲ ಭಕ್ತಿಯ ಪರಕಾಷ್ಟೆಯೋ... ? ದೃಶ್ಯವನ್ನೊಮ್ಮೆ ನೋಡಿದರೆ ನಿಮ್ಗೂ ಸಹ ಪ್ರಶ್ನೆ ಸಹಜವಾಗಿ ಕಾಡುತ್ತೆಅಲ್ಲಿನ ದೇವರಿಗೆ ಹರಕೆ ಹೊತ್ತ ಜನ ತಮ್ಮ ಬೆನ್ನು ಮೂಳೆಗಳಿಗೆ ಕಬ್ಬಿಣದ ಕೊಕ್ಕಿಗಳನ್ನು ಹಾಗೂ ಚೂಪಾದ ಕತ್ತಿಗಳನ್ನು ಚುಚ್ಚಿಕೊಂಡು ವಿಶಿಷ್ಟ ರೀತಿಯಲ್ಲಿ ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಹಾಗಾದ್ರೆ  ವಿಶಿಷ್ಟ ಆಚರಣೆ ಇರೋ ದೇವಾಲಯ ಯಾವುದು, ದೇವರ ಹೆಸರೇನೂ ಎಂಬ ಕುತೂಹಲಕ್ಕಾಗಿ ಮುಂದೆ ಓದಿ…

ಬೆನ್ನು ಮೂಳೆಗೆ ಕಬ್ಬಿಣದ ಸರಳನ್ನು ಚುಚ್ಚಿಕೊಂಡು ವಾಹನವನ್ನು ಎಳೆಯುತ್ತಿರುವ ಭಕ್ತ, ಚೂಪಾದ ಕತ್ತಿಯನ್ನು ಬೆನ್ನಿಗೆ ಕಟ್ಟಿಕೊಂಡು ವಾಹನದ ಮೇಲೆ ನೇತಾಡುತ್ತಿರುವ ಯುವಕ ದೃಶ್ಯಗಳು ಕಂಡುಬರುವುದು ತಮಿಳುನಾಡಿನ ಹೊಸೂರಿನಲ್ಲಿ. ಹೊಸೂರಿನ ಕೊಟೆ ಮಾರಿಯಮ್ಮ ಜಾತ್ರಾ ಮಹೊತ್ಸವ  ವಿಜೃಂಭಣೆಯಿಂದ ನೆರವೇರಿತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಜಾತ್ರೆಗೆ ಭಕ್ತಾಧಿಗಳು ಆಗಮಿಸಿ ತಮ್ಮ ಹರಕೆಯನ್ನು ಈಡೇರಿಸಿದರು, ದೇವಿಗೆ ವಿಚಿತ್ರ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳುವ ಭಕ್ತರು ತಮ್ಮ  ಹರಕೆ ಈಡೇರಿದರೆ ಮಾರಿಯಮ್ಮನಿಗೆ ತಮ್ಮ ಬೆನ್ನುಗಳಿಗೆ ಚೂಪಾದ ಕತ್ತಿಯಿಂದ ಇಲ್ಲವೇ ಕಬ್ಬಿಣದ ಸರಳಿನಿಂದ ಚುಚ್ಚಿಕೊಂಡು ತಮ್ಮ ಹರಕೆಗಳನ್ನು ಈಡೇರಿಸುತ್ತಾರೆ. ಇನ್ನೂ ಕೆಲವರು ತಮ್ಮ ಬೆನ್ನು ಮೂಳೆಗೆ ಕಬ್ಬಿಣದ ಸರಳುಗಳಿಂದ ಬಿಗಿಯಾಗಿ ಚುಚ್ಚಿಕೊಂಡು ವಾಹನಗಳನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ ತಮ್ಮ ಹರಕೆಯನ್ನ ಭಕ್ತಿಯಿಂದ ದೇವಿಗೆ ಸಮರ್ಪಿಸುತ್ತಾರೆ.

ದೇವರ ಶಕ್ತಿ ಅಪಾರವಾಗಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿನ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆಗಳನ್ನ ಕಟ್ಟಿಕೊಳ್ಳುತ್ತಾರೆ. ಇದ್ದಲ್ಲದೇ ಇಲ್ಲಿನ ಕೆಲವು ಮಹಿಳೆಯರ ಮೇಲೆ ದೇವಿ ಆವಾಹನೆಯಾಗಿ ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಣಾ ನದಿ ಪ್ರವಾಹ: ಒಂದು ಕಿ.ಮೀ ಈಜಿ ಜೀವ ಉಳಿಸಿಕೊಂಡರು