Publish Date: Thu, 19 Jul 2018 (18:55 IST)
Updated Date: Thu, 19 Jul 2018 (18:58 IST)
ಕೊಟ್ಟಿಗೆ ಮನೆಯ ಬೀಗ ಮುರಿದು ಗರ್ಭ ಧರಿಸಿದ್ದ ಹಸುಗಳನ್ನು ಕಳವು ಮಾಡಲಾಗಿದೆ. ಹೀಗಾಗಿ ರಾತ್ರಿ ಪಾಳಿಯಲ್ಲಿ ಪೊಲೀಸರು ಬೀಟ್ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಕೊಟ್ಟಿಗೆ ಮನೆಯ ಬೀಗ ಮುರಿದು, ಹಸುಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಘಂಟೆ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೈನುಗಾರಿಕೆಯನ್ನೇ ಜೀವನಾಧಾರ ಮಾಡಿಕೊಂಡಿದ್ದ ಲಿಂಗಮ್ಮ ಎನ್ನುವರ ಎರಡು ಹಸು ಕಳುವಾಗಿದೆ.
ಸುಮಾರು 1ಲಕ್ಷ 25 ಸಾವಿರ ಬೆಲೆ ಬಾಳುವ ಹಸುಗಳಾಗಿದ್ದು, ಲಿಂಗಮ್ಮನವರ ಕುಟುಂಬ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಹಿಂದೆ ಕೂಡ ಇದೇ ಗ್ರಾಮದ ಸುತ್ತಾ ಮುತ್ತಾ, ಹಸುಗಳು ಕಳುವಾಗಿದ್ದವು, ಪೊಲೀಸರು ರಾತ್ರಿ ಪಾಳೆಯದಲ್ಲಿ ಸೂಕ್ತ ಬೀಟ್ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಡಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.