Publish Date: Thu, 19 Jul 2018 (14:28 IST)
Updated Date: Thu, 19 Jul 2018 (14:31 IST)
ಆತ ರೈತನ ಮಗ, ಹಳ್ಳಿಯವನು. ಆದರೇನಂತೆ ಆತನಲ್ಲಿದ್ದ ಮೊಬೈಲ್ ನಲ್ಲಿ ಅಪರೂಪದ ದೃಶ್ಯವನ್ನು ಸೆರೆಹಿಡಿದ್ದಾನೆ. ಪರಸ್ಪರ ಹಗೆತನ ಸಾಧಿಸುವ ಪ್ರಾಣಿಗಳು ಆ ದೃಶ್ಯಗಳಲ್ಲಿ ಅನ್ಯೋನ್ಯವಾಗಿವೆ. ಹೊಸ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯುವಂತಿವೆ. ಅವು ಯಾವುವು ಗೊತ್ತಾ?
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮೋಟಗಾನಹಳ್ಳಿಯಲ್ಲಿ, ಮೂಕ ಪ್ರಾಣಿಗಳಾದ ಹಸು ಹಾಗೂ ನಾಯಿ ಮರಿಗಳ ಸಖತ್ ಫ್ರೆಂಡ್ ಶಿಫ್ ದೃಶ್ಯ ಹಳ್ಳಿಯ ರೈತ ಮಗನ ಮೊಬೈಲ್ ನಲ್ಲಿ ಸೆರೆಯಾಗಿದೆ. ಮೋಟಗಾನಹಳ್ಳಿಯ ಜಯಸಿಂಹ ಎಂಬುವರ ತೋಟದ ಬಳಿ ಎರಡು ನಾಯಿ ಮರಿಗಳಿವೆ. ಅಲ್ಲಿಯೇ ಜಯಸಿಂಹರವರು ನಿತ್ಯವೂ ತಮ್ಮ ಒಂದು ಹಸುವನ್ನು ಕಟ್ಟಿ ಹಾಕುತ್ತಾರೆ. ಹಸುವನ್ನ ಕಟ್ಟಿಹಾಕಿ ಮಾಲೀಕ ಜಯಸಿಂಹ ಅತ್ತ ಹೋಗುತ್ತಿದ್ದಂತೆ, ಬರುವ ನಾಯಿಮರಿಗಳು ಹಸು ಜೊತೆ ಸಖತ್ ಎಂಜಾಯ್ ಮಾಡ್ತೀವೆ. ಇದೀಗ ಈ ಹಸು ಹಾಗೂ ನಾಯಿಗಳ ಮಧ್ಯೆ ಗಟ್ಟಿ ಸ್ನೇಹ ಮೂಡಿದೆ.
ನಿತ್ಯವೂ ಚಿಕ್ಕ ಮಕ್ಕಳಂತೆ ಚೆಲ್ಲಾಟವಾಡುವ ಮೂಕ ಪ್ರಾಣಿಗಳು ಸಖತ್ ಎಂಜಾಯ್ ಮಾಡ್ತೀವೆ. ಅಲ್ಲದೆ ಈ ಹಸು ಜೊತೆ ಅಪರಿಚಿತರು ಹಾಗೂ ಯಾವುದೇ ಪ್ರಾಣಿಗಳು ಬರದಂತೆ ನೋಡಿಕೊಳ್ಳುವುದರ ಜೊತೆಗೆ ನಾಯಿಗಳು ಸಹ ಕಾವಲನ್ನ ಕಾಯುತ್ತವೆ.