Publish Date: Fri, 29 Jun 2018 (15:32 IST)
Updated Date: Fri, 29 Jun 2018 (15:39 IST)
ಬೆಂಗಳೂರು : ‘ರಾಜಾಹುಲಿ’ ಸಿನಿಮಾದಲ್ಲಿ ನಟಿಸಿದ ನಟ ಹರ್ಷ ಅವರ ಮೇಲೆ ಹೋಟೆಲ್ ಒಂದರ ಹುಡುಗರು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ನಟ ಹರ್ಷ ಹಾಗೂ ಅವರ ಸ್ನೇಹಿತರು, ಸ್ನೇಹಿತನ ಮದುವೆಗೆಂದು ಮೈಸೂರಿಗೆ ತೆರಳಿ ವಾಪಾಸ್ ಬರುವ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲದ ಬೆಳ್ಳೂರು ಕ್ರಾಸ್ ಬಳಿ ಕಾರ್ ನಿಲ್ಲಿಸಿ ಊಟಕ್ಕೆಂದು ಹೋಟೆಲ್ ಒಂದಕ್ಕೆ ತೆರಳಿದ್ದರು. ಅಲ್ಲಿ ಸರ್ವ್ ಮಾಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಹೊಟೇಲ್ ಹುಡುಗರು, ಹರ್ಷ ಮತ್ತವರ ಸ್ನೇಹಿತರನ್ನು ಬಂಧನದಲ್ಲಿರಿಸಿಕೊಂಡು ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ