Select Your Language

Notifications

webdunia
webdunia
webdunia
webdunia

ರಾಜ್ಯದ ಏಕೈಕ ಆಷಾಢ ರಥೋತ್ಸವ ಈ ಬಾರಿ ನಡೆಯೋದಿಲ್ಲ; ನವದಂಪತಿಗಳಿಗೆ ಫುಲ್ ನಿರಾಸೆ

ರಾಜ್ಯದ ಏಕೈಕ ಆಷಾಢ ರಥೋತ್ಸವ ಈ ಬಾರಿ ನಡೆಯೋದಿಲ್ಲ; ನವದಂಪತಿಗಳಿಗೆ ಫುಲ್ ನಿರಾಸೆ
ಚಾಮರಾಜನಗರ , ಗುರುವಾರ, 19 ಜುಲೈ 2018 (14:24 IST)
ಒಂದು ತಿಂಗಳ ವಿರಹ ವೇದನೆ ಅನುಭವಿಸಿ, ರಥೋತ್ಸವದ ನೆಪದಲ್ಲಿ ಜೊತೆಯಾಗುತ್ತಿದ್ದ ನವದಂಪತಿಗಳಿಗೆ ಬಾರಿಯೂ ನಿರಾಸೆ ಕಾದಿದೆ. ಆಷಾಢ ಮಾಸದಲ್ಲಿ ಇಡೀ ರಾಜ್ಯದಲ್ಲಿ ನಡೆಯುತ್ತಿದ್ದ ಏಕೈಕ ರಥೋತ್ಸವ ಈ ಬಾರಿಯೂ ನಡೆಯೋದಿಲ್ಲ.

ಆಷಾಢ ಮಾಸದಲ್ಲಿ ಇಡೀ ರಾಜ್ಯದಲ್ಲಿ ನಡೆಯುತ್ತಿದ್ದ ಏಕೈಕ ರಥೋತ್ಸವ ಅಂದರೆ ಅದು ಚಾಮರಾಜನಗರದ ಚಾಮರಾಜೇಶ್ವರ ತೇರು. ಆದ್ರೆ ಕಳೆದ ವರ್ಷ ಸ್ಥಗಿತಗೊಂಡ ರಥೋತ್ಸವ ಬಾರಿಯೂ ನಡೆಯದೇ ಇರುವ ಪರಿಸ್ಥಿತಿ ಮುಂದುವರಿದಿದೆ. ಒಂದು ತಿಂಗಳ ವಿರಹ ವೇದನೆ ಅನುಭವಿಸಿ, ರಥೋತ್ಸವದ ನೆಪದಲ್ಲಿ ಜೊತೆಯಾಗುತ್ತಿದ್ದ ನವದಂಪತಿಗಳಿಗೆ ಬಾರಿಯೂ ನಿರಾಸೆ ಕಾದಿದೆ.

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನ ಆಷಾಢ ರಥೋತ್ಸವಕ್ಕೇ ಫೇಮಸ್. ಸಾಮಾನ್ಯವಾಗಿ ಆಷಾಢ ರಥೋತ್ಸವ ರಾಜ್ಯದ ಬೇರೆಲ್ಲೂ ನಡೆಯದಿರುವುದರಿಂದ, ಆಷಾಢ ಕಾರಣಕ್ಕೆ ಪರಸ್ಪರ ಒಂದು ತಿಂಗಳ ಕಾಲ ದೂರವಿರುವ ನವದಂಪತಿಗಳು, ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಹಣ್ಣುಧವನ ಎಸೆಯುವ ಮೂಲಕ ಮತ್ತೆ ಒಂದಾಗಿ ಖುಷಿ ಅನುಭವಿಸ್ತಿದ್ರು. ಆದ್ರೆ ಕಳೆದ ವರ್ಷ ರಥೋತ್ಸವಕ್ಕೆ ಇನ್ನೂ ಒಂದು ತಿಂಗಳಿರುವಾಗ ಕಿಡಿಗೇಡಿಯೊಬ್ಬ ನಿಂತಿದ್ದ ರಥಕ್ಕೆ ಬೆಂಕಿ ಹಚ್ಚಿದ್ದು, ಇದರೊಂದಿಗೆ ರಥದ ಚಕ್ರಗಳು ಶಿಥಿಲಗೊಂಡಿರುವುದರಿಂದ ರಥೋತ್ಸವ ಅಂದಿನಿಂದ ಸ್ಥಗಿತಗೊಂಡಿತು.

ರಥವನ್ನು ರಿಪೇರಿ ಮಾಡಲು ಒಂದು ಕೋಟಿ ರೂಪಾಯಿ ನೀಡಿದ್ರೂ ಸಹ, ಅದು ಸಕಾಲಕ್ಕೆ ದುರಸ್ಥಿಯಾಗಲೇ ಇಲ್ಲ. ಹೀಗಾಗಿ ಈ ಬಾರಿಯೂ ರಥೋತ್ಸವ ನಡೆಯುತ್ತಿಲ್ಲ.




Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿ, ಶುಂಠಿ ಬೆಳೆಗಾರ ಕಾಡಾನೆಗಳ ದಾಳಿಗೆ ಕಂಗಾಲು