Select Your Language

Notifications

webdunia
webdunia
webdunia
webdunia

ಆಷಾಢದಲ್ಲಿ ಹೆಣ್ಣುಮಕ್ಕಳು ಗೋರಂಟಿ ಹಚ್ಚಿಕೊಂಡರೆ ಏನಾಗುತ್ತೆ ಗೊತ್ತಾ?

ಆಷಾಢದಲ್ಲಿ ಹೆಣ್ಣುಮಕ್ಕಳು ಗೋರಂಟಿ ಹಚ್ಚಿಕೊಂಡರೆ ಏನಾಗುತ್ತೆ ಗೊತ್ತಾ?
ಬೆಂಗಳೂರು , ಶುಕ್ರವಾರ, 1 ಜೂನ್ 2018 (06:15 IST)
ಬೆಂಗಳೂರು : ಗೋರಂಟಿ ಹೆಸರು ಕೇಳಿದರೆ ಸಾಕು ಹೆಣ್ಣುಮಕ್ಕಳ ಮನಸ್ಸು ಉಬ್ಬಿಕೊಳ್ಳುತ್ತದೆ. ತಮಗೆ ಸಮಯ  ಸಿಕ್ಕಾಗಲೆಲ್ಲಾ ಗೋರಂಟಿ ಹಚ್ಚಿಕೊಳ್ಳುತ್ತಾರೆ. ಆದರೆ ನಮ್ಮ ಹಿರಿಯರು ಮಾತ್ರ ಯಾವ ಕಾಲದಲ್ಲಿ ಹಚ್ಚದಿದ್ದರೂ ಪರವಾಗಿಲ್ಲ, ಆದರೆ ಆಷಾಢ ಮಾಸದಲ್ಲಿ ಮಾತ್ರ ಹೆಣ್ಣುಮಕ್ಕಳು ಗೋರಂಟಿ ಹಚ್ಚಿಕೊಳ್ಳಲೆ ಬೇಕು ಎಂದು ಹೇಳುತ್ತಾರೆ. ಯಾಕೆಂದರೆ ಆಷಾಢ ಮಾಸದಲ್ಲಿ ಗೋರಂಟಿ ಇಟ್ಟುಕೊಳ್ಳುವುದರಿಂದ ಆರೋಗ್ಯವಾಗಿಯೂ, ಆಧ್ಯಾತ್ಮಿಕವಾಗಿಯೂ ಅದೆಷ್ಟೋ ಉಪಯೋಗಗಳಿವೆ.


ಆಷಾಢದಲ್ಲಿ ಗ್ರೀಷ್ಮ ಋತು ಮುಗಿದು ವರ್ಷ ಋತು ಆರಂಭವಾಗುತ್ತದೆ. ಗ್ರೀಷ್ಮದಲ್ಲಿ ನಮ್ಮ ದೇಹ ಉಷ್ಣದಿಂದ ಕೂಡಿರುತ್ತದೆ. ಆಷಾಢದಲ್ಲಿ ಹೊರಗಿನ ವಾತಾವರಣ ತಣ್ಣಗಾಗಿರುತ್ತದೆ. ಆ ರೀತಿ ಸಮಯದಲ್ಲಿ ನಮ್ಮ ದೇಹದಲ್ಲಿನ ಬಿಸಿ ಹೊರಗೆ ತಣ್ಣಗಿನ ವಾತಾವರಣಕ್ಕೆ ವಿರುದ್ಧವಾಗಿ ತಯಾರಾಗಿರುತ್ತದೆ. ಆದಕಾರಣ ಅನಾರೋಗ್ಯಗಳು ತಪ್ಪಿದ್ದಲ್ಲ. ಹಾಗಾಗಿ ಗೋರಂಟಿ ಇಟ್ಟುಕೊಳ್ಳುತ್ತಾರೆ. ಗೋರಂಟಿ ಸೊಪ್ಪಿಗೆ ದೇಹದಲ್ಲಿ ಇರುವ ಉಷ್ಣತೆಯನ್ನು ಕಡಿಮೆ ಮಾಡುವ ಶಕ್ತಿ ಇದೆ. ಅಷ್ಟೇ ಅಲ್ಲದೆ ಗೋರಂಟಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಗೋರಂಟಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕೆಂದು ಹಿರಿಯರು ಹೇಳುವುದಷ್ಟೇ ಅಲ್ಲ, ವೈದ್ಯರು ಸಹ ಒಳ್ಳೆಯದೆಂದು ಹೇಳುತ್ತಿದ್ದಾರೆ.


ಆಧ್ಯಾತ್ಮಿಕ ಪರವಾಗಿ ಗೋರಂಟಿ ಸೌಭಾಗ್ಯಕ್ಕೆ ಪ್ರತೀಕ. ಆಷಾಢದಲ್ಲಿ ಮಹಿಳೆಯರು ಗೋರಂಟಿ ಇಟ್ಟುಕೊಳ್ಳುವ ಮೂಲಕ ಸೌಭಾಗ್ಯವನ್ನು ಪಡೆದಂತವರಾಗುತ್ತಾರೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ತಿಂಗಳಲ್ಲಿ ಹುಟ್ಟಿದವರು ಯಾವ ಉದ್ಯೋಗ ಮಾಡುತ್ತಾರೆ ಎಂಬುದನ್ನು ತಿಳಿಬೇಕಾ...?