Publish Date: Sat, 02 Jun 2018 (08:55 IST)
Updated Date: Sat, 02 Jun 2018 (08:56 IST)
ಮುಂಬೈ: ಕನ್ನಡಿಗ, ಕ್ರಿಕೆಟಿಗ ಕೆಎಲ್ ರಾಹುಲ್ ಜತೆ ಬಾಲಿವುಡ್ ನಟಿ ನಿಧಿ ಅಗರ್ವಾಲ್ ಡೇಟಿಂಗ್ ಮಾಡುತ್ತಿದ್ದಾರಾ? ಈ ಇಬ್ಬರೂ ಇತ್ತೀಚೆಗೆ ಜತೆಯಾಗಿ ರೆಸ್ಟೋರೆಂಟ್ ನಿಂದ ಹೊರಂಬದ ಫೋಟೋ ವೈರಲ್ ಆಗಿತ್ತು.
ಇದೀಗ ಬಾಲಿವುಡ್ ನಟಿ ಜತೆಗಿನ ಸ್ನೇಹದ ಕುರಿತು ಕೆಎಲ್ ರಾಹುಲ್ ಬಾಯ್ಬಿಟ್ಟಿದ್ದಾರೆ. ನಾನು ಮತ್ತು ನಿಧಿ ಬೆಂಗಳೂರಿನಲ್ಲಿದ್ದವರು. ನಮ್ಮಿಬ್ಬರ ನಡುವೆ ಮೊದಲಿನಿಂದಲೂ ಸ್ನೇಹವಿದೆ. ಒಬ್ಬ ಹುಡುಗಿ ಸ್ನೇಹಿತೆಯಾದರೆ ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ನನಗೆ ಪ್ರೀತಿಯಾಗಿದ್ದರೆ ಅದರಲ್ಲಿ ಮುಚ್ಚಿಡುವಂತಹದ್ದು ಏನಿಲ್ಲ. ಅದನ್ನು ಎಲ್ಲರಿಗೂ ಬಹಿರಂಗಪಡಿಸುತ್ತೇನೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.