Publish Date: Sat, 02 Jun 2018 (08:50 IST)
Updated Date: Sat, 02 Jun 2018 (08:52 IST)
ಮುಂಬೈ: ಸುಪ್ರೀಂ ಕೋರ್ಟ್ ನಿಯಮಿತ ಲೋಧಾ ಸಮಿತಿ ನಿಯಮದಿಂದಾಗಿ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಐಪಿಎಲ್ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಆದರೆ ಇದೀಗ ಸುಪ್ರೀಂಕೋರ್ಟ್ ನಿಯಮಿತ ಆಡಳಿತ ಮಂಡಳಿಯೇ ಇವರಿಬ್ಬರೂ ಮತ್ತೆ ಐಪಿಎಲ್ ಕಣಕ್ಕೆ ಮರಳಲು ಅವಕಾಶ ನೀಡುವಂತಹ ನಿಯಮ ತಿದ್ದುಪಡಿಗೆ ಚಿಂತನೆ ನಡೆಸಿದೆ.
ಆಡಳಿತ ಮಂಡಳಿ ಈ ಇಬ್ಬರೂ ಕೋಚ್ ಗಳು ಐಪಿಎಲ್ ಗೆ ಮರಳುವುದಕ್ಕೆ ಬೆಂಬಲ ಸೂಚಿಸಿದೆ. ಹೀಗಾದರೆ ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿಗೆ ಮತ್ತೆ ಐಪಿಎಲ್ ಗೆ ಮರಳಲು ಸಾಧ್ಯವಾಗುತ್ತದೆ. ಈಗಿನ ನಿಯಮದ ಪ್ರಕಾರ ರಾಷ್ಟ್ರೀಯ ತಂಡದ ಕೋಚ್ ಆಗಿರುವವರು ಐಪಿಎಲ್ ನಲ್ಲಿ ಮೆಂಟರ್ ಅಥವಾ ಕೋಚ್ ಹುದ್ದೆ ನಿಭಾಯಿಸುವಂತಿಲ್ಲ ಎಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.