Select Your Language

Notifications

webdunia
webdunia
webdunia
Sunday, 13 April 2025
webdunia

ಇಂಗ್ಲೆಂಡ್ ಸರಣಿ ವೇಳೆಗೆ ಫಿಟ್ ಆಗಲು ವಿರಾಟ್ ಕೊಹ್ಲಿ ಏನೇನೋ ಮಾಡ್ತಿದ್ದಾರಂತೆ!

ವಿರಾಟ್ ಕೊಹ್ಲಿ
ಮುಂಬೈ , ಬುಧವಾರ, 30 ಮೇ 2018 (09:50 IST)
ಮುಂಬೈ: ಸದ್ಯಕ್ಕೆ ಗಾಯದಿಂದಾಗಿ ಅತ್ತ ಕೌಂಟಿ ಕ್ರಿಕೆಟ್ ಆಡಲು ಸಾಧ್ಯವಾಗದೇ ಇತ್ತ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಆಡಲಾಗದೇ ವಿಶ್ರಾಂತಿ ಪಡೆಯುತ್ತಿರುವ ವಿರಾಟ್ ಕೊಹ್ಲಿ ಫಿಟ್ ಆಗಲು ಏನು ಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರಂತೆ.

ಇಂಗ್ಲೆಂಡ್ ಸರಣಿ ಕೊಹ್ಲಿ ಮತ್ತು ಟೀಂ ಇಂಡಿಯಾ ಪಾಲಿಗೆ ಮಹತ್ವದ್ದು.  ಇಲ್ಲಿ ಯಶಸ್ಸು ಸಾಧಿಸಿದರೆ ಟೀಂ ಇಂಡಿಯಾವನ್ನು ಹಿಡಿಯುವವರೇ ಇರಲ್ಲ. ಹಾಗಾಗಿ ಈ ಮಹತ್ವದ ಸರಣಿಗೆ ಫಿಟ್ ಆಗಲು ಕೊಹ್ಲಿ ತಮ್ಮ ಕೈಲಾಗುವುದನ್ನೆಲ್ಲಾ ಮಾಡುತ್ತಿದ್ದಾರಂತೆ.

ಜೂನ್ 15 ರಂದು ಬೆಂಗಳೂರಿನಲ್ಲಿ ಕೊಹ್ಲಿ ಫಿಟ್ ನೆಸ್ ಟೆಸ್ಟ್ ಗೆ ಒಳಗಾಗಬೇಕಿದೆ. ಅದಕ್ಕಿಂತ ಮೊದಲು ಫಿಟ್ ಆಗಲು ನಾನು ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದ್ದೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಕಠಿಣ ಪರಿಶ್ರಮ ಪಡುತ್ತಿದ್ದೇನೆ. ಕಷ್ಟಪಟ್ಟಿದ್ದಕ್ಕೆ ಯಾವತ್ತೂ ಫಲ ಸಿಕ್ಕೇ ಸಿಗುತ್ತದೆ ಎಂದು ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ನೀಡಿದ್ದಾರೆ. ಅಭಿಮಾನಿಗಳೂ ಇದನ್ನೇ ಬಯಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಿಂದ ಕೈಬಿಟ್ಟಿದ್ದೇ ಒಳ್ಳೆದಾಯ್ತು ಎಂದು ಅಜಿಂಕ್ಯಾ ರೆಹಾನೆ ಹೇಳಿದ್ದೇಕೆ?