Publish Date: Fri, 01 Jun 2018 (08:58 IST)
Updated Date: Fri, 01 Jun 2018 (08:59 IST)
ಮುಂಬೈ: ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಧೋನಿ ಈ ಬಾರಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ತುಂಬಾ ಸಮಯದ ನಂತರ ಒಂದೇ ತಂಡದಲ್ಲಿ ಆಡಿದ ಧೋನಿಗೆ ಭಜಿ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆ.
ಹಿಂದೆ ಏಕದಿನ ವಿಶ್ವಕಪ್ ಗೆದ್ದ ಮೈದಾನದಲ್ಲೇ ಮತ್ತೆ ಐಪಿಎಲ್ ಚಾಂಪಿಯನ್ ಆದ ಖುಷಿಗೆ ಧೋನಿಗೆ ಭಜಿ ಸ್ಪೆಷಲ್ ಮೆಸೇಜ್ ಬರೆದಿದ್ದಾರೆ. ‘2011 ರ ವಿಶ್ವಕಪ್ ಗೆದ್ದ ಅದೇ ಮೈದಾನದಲ್ಲಿ ಮತ್ತೆ ನಾವು ಒಂದೇ ತಂಡಕ್ಕಾಗಿ ಆಡಿ ಮತ್ತೆ ಗೆಲ್ಲುತ್ತೇವೆ ಎಂದು ಅಂದುಕೊಂಡಿರಲೇ ಇಲ್ಲ. ನಮ್ಮಿಬ್ಬರಿಗೂ ವಾಂಖೆಡೆ ಮೈದಾನ ಅದೃಷ್ಟದ ಮೈದಾನ ಅಲ್ಲವೇ?’ ಎಂದು ಧೋನಿ ಜತೆಗೆ ಪೆವಿಲಿಯನ್ ಕೂತಿರುವ ಫೋಟೋ ಸಮೇತ ಭಜಿ ಸಂದೇಶ ಬರೆದಿದ್ದಾರೆ.
ಇದಕ್ಕೂ ಮೊದಲು ಭಜಿ ತಮ್ಮ ತಂಡದ ಸಹವರ್ತಿಗಳೊಂದಿಗೆ ಐಪಿಎಲ್ ನಲ್ಲಿ ಗೆದ್ದ ಖುಷಿಗೆ ಪಾರ್ಟಿ ಮಾಡಿದ ಫೋಟೋವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದರು. ಅಂತೂ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದ ಬೇಸರವನ್ನು ಭಜಿ ಐಪಿಎಲ್ ಗೆದ್ದ ಖುಷಿಯ ಮೂಲಕ ಕಳೆಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.