Publish Date: Tue, 29 May 2018 (11:25 IST)
Updated Date: Tue, 29 May 2018 (11:27 IST)
ಬೆಂಗಳೂರು: ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ದ.ಆಫ್ರಿಕಾ ಮೂಲದ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೂ ಶಾಕ್ ಕೊಟ್ಟಿದ್ದಾರೆ.
ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡುವ ಎಬಿಡಿ ತಂಡದ ಆಧಾರ ಸ್ತಂಬ. ಕೊಹ್ಲಿ ಬಿಟ್ಟರೆ ಆರ್ ಸಿಬಿಯ ನಂಬಿಕಸ್ತ ಬ್ಯಾಟ್ಸ್ ಮನ್ ಎಂದರೆ ಎಬಿಡಿ. ಇದೇ ಕಾರಣಕ್ಕೆ ಭಾರತದಲ್ಲೂ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಆದರೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಐಪಿಎಲ್ ನ ತಮ್ಮ ಆರ್ ಸಿಬಿ ತಂಡದ ಟ್ವಿಟರ್ ಖಾತೆಯನ್ನು ಅನ್ ಫಾಲೋ ಮಾಡಿದ್ದಾರೆ. ಇದರಿಂದಾಗಿ ಎಬಿಡಿ ಮುಂದೆ ಐಪಿಎಲ್ ನಿಂದಲೂ ಹೊರ ಹೋಗುತ್ತಾರಾ ಎಂಬ ಅನುಮಾನ ಮೂಡಿಸಿದೆ. ಅಥವಾ ಆರ್ ಸಿಬಿಯಿಂದ ಹೊರ ಬಂದು ಬೇರೆ ತಂಡ ಕೂಡಿಕೊಳ್ಳುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆಲ್ಲಾ ಎಬಿಡಿಯೇ ಉತ್ತರಿಸಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.