Publish Date: Mon, 28 May 2018 (10:18 IST)
Updated Date: Mon, 28 May 2018 (10:25 IST)
ಮುಂಬೈ: ವಾಂಖೆಡೆ ಮೈದಾನದಲ್ಲಿ ಭಾನುವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಗೆದ್ದ ಖುಷಿಯಲ್ಲಿ ಟೀಂ ಫೋಟೋಗೆ ಪೋಸ್ ಕೊಡುತ್ತಿದ್ದರೆ ಧೋನಿ ಮಾತ್ರ ಬೇರೆಯದೇ ಲೋಕದಲ್ಲಿದ್ದರು!
ತಂಡದ ಸಹ ಆಟಗಾರರು ಚಾಂಪಿಯನ್ ಬೋರ್ಡ್ ಎದುರು ನಿಂತು ಫೋಟೋಗೆ ಪೋಸ್ ಕೊಡುತ್ತಿದ್ದರೆ ಧೋನಿ ಹಿಂದೆ ಉಳಿದುಕೊಂಡು ತಮ್ಮ ಮುದ್ದಿನ ಮಗಳು ಜೀವಾಗಾಗಿ ಕಾಯುತ್ತಿದ್ದರು.
ಆಕೆ ಒಬ್ಬಳೇ ಮೈದಾನಕ್ಕೆ ಓಡಿ ಬಂದರೆ ಧೋನಿ ಓಡಿ ಬಂದು ಆಕೆಯನ್ನು ಎತ್ತಿಕೊಂಡು ತಂಡದ ಫೋಟೋ ಸೆಷನ್ ನಲ್ಲಿ ಭಾಗಿಯಾದರು. ನಾಯಕನಾಗಿ ಎದುರು ನಿಲ್ಲುವ ಬದಲು ಹಿಂದೆ ಉಳಿದುಕೊಂಡರು. ಆಗಲೂ ತಮ್ಮ ತಂಡದ ಆಟಗಾರರ ಜತೆ ಖುಷಿಯಿಂದ ಪೋಸ್ ಕೊಡುವ ಬದಲು ಮೈದಾನದ ಎಲ್ ಇಡಿ ಸ್ಕ್ರೀನ್ ನಲ್ಲಿ ಮೂಡಿಬರುತ್ತಿದ್ದ ತಮ್ಮಿಬ್ಬರ ವಿಡಿಯೋವನ್ನು ಪುತ್ರಿ ಖುಷಿಯಿಂದ ತೋರಿಸುತ್ತಿದ್ದರೆ ಅತ್ತ ಕಡೆಗೆ ನೋಡುತ್ತಾ ಮಗಳ ಜತೆಗೆ ಎಂಜಾಯ್ ಮಾಡುತ್ತಿದ್ದರು. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.