Publish Date: Mon, 28 May 2018 (08:37 IST)
Updated Date: Mon, 28 May 2018 (08:39 IST)
ಮುಂಬೈ: ಐಪಿಎಲ್ 11 ನೇ ಆವೃತ್ತಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಗೆದ್ದುಕೊಂಡಿದೆ. ನಿನ್ನೆ ಚೆನ್ನೈಗೆ ಅಸಾಧ್ಯವಾಗಿದ್ದ ಗುರಿಯನ್ನು ಸಾಧ್ಯವಾಗಿಸಿದ ಗರಿಮೆ ಆಸೀಸ್ ಮೂಲದ ಆಟಗಾರ ಶೇನ್ ವ್ಯಾಟ್ಸನ್ ಗೆ ಸಲ್ಲುತ್ತದೆ.
ಹೈದರಾಬಾದ್ ನೀಡಿದ 179 ರನ್ ಗಳ ಗುರಿಯನ್ನು ಬೆನ್ನತ್ತಲು ಪ್ರಾರಂಭಿಸಿದ ಚೆನ್ನೈ ಆರಂಭ ತೀರಾ ನಿಧಾನವಾಗಿತ್ತು. ಮೊದಲ 5 ಓವರ್ ಗಳ ಆಟದ ಗತಿ ನೋಡಿದರೆ ಯಾರೂ ಚೆನ್ನೈ ಗೆಲ್ಲುತ್ತದೆ ಎಂದು ಅಂದುಕೊಂಡಿರಲಿಲ್ಲ.
ಆದರೆ ನಂತರ ಬಿರುಗಾಳಿಯಂತೆ ಆಡಿದ ಆರಂಭಿಕ ಶೇನ್ ವ್ಯಾಟ್ಸನ್ ಕೇವಲ 57 ಎಸೆತಗಳಲ್ಲಿ ಭರ್ಜರಿ ಶತಕ (117) ದಾಖಲಿಸಿ ತಂಡಕ್ಕೆ 18.5 ಓವರ್ ಗಳಲ್ಲೇ ಜಯ ಕೊಡಿಸಿದರು. ಜತೆಗೆ ಹಿರಿಯ ಆಟಗಾರ ಸುರೇಶ್ ರೈನಾ (32) ಸಾಥ್ ಕೊಟ್ಟರು. ಹೀಗಾಗಿ ಚೆನ್ನೈಗೆ 8 ವಿಕೆಟ್ ಗಳ ಭರ್ಜರಿ ಜಯ ದೊರಕಿತು.
ಆರಂಭದಲ್ಲಿ ಹೈದರಾಬಾದ್ ಪರ ಬಿಗಿ ದಾಳಿ ನಡೆಸಿದ್ದ ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ ನಂತರ ನಿಯಂತ್ರಣ ಕಳೆದುಕೊಂಡರು. ಇದರೊಂದಿಗೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಪಡೆ ಮೂರನೇ ಬಾರಿ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಮುಂಬೈ ಕೂಡಾ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.