Publish Date: Sun, 27 May 2018 (09:31 IST)
Updated Date: Sun, 27 May 2018 (09:35 IST)
ನವದೆಹಲಿ: ಈ ಬಾರಿಯ ಐಪಿಎಲ್ ಫೈನಲ್ ಪಂದ್ಯಕ್ಕೆ ತಮ್ಮ ಕೋಲ್ಕೊತ್ತಾ ನೈಟ್ ರೈಡರ್ಸ್ ಬಂದೇ ಬರುತ್ತದೆಂಬ ಭರವಸೆಯಲ್ಲಿದ್ದ ಮಾಲಿಕ, ನಟ ಶಾರುಖ್ ಖಾನ್ ಈಗಾಗಲೇ ವಿಮಾನ ಟಿಕೆಟ್ ಕೂಡಾ ಬುಕ್ ಮಾಡಿದ್ದರಂತೆ.
ಆದರೆ ಆಗಿದ್ದೇ ಇನ್ನೊಂದು. ಕೆಕೆಆರ್ ಸೆಮಿಫೈನಲ್ ನಲ್ಲಿ ಹೈದರಾಬಾದ್ ವಿರುದ್ಧ ಮುಗ್ಗರಿಸಿತು. ಇದರಿಂದಾಗಿ ಶಾರುಖ್ ಇದೀಗ ಫೈನಲ್ ಗೆ ಹೋಗುವ ಮೂಡ್ ನಲ್ಲಿ ಇಲ್ಲ. ಟಿಕೆಟ್ ರದ್ದು ಮಾಡುತ್ತೇನೆಂದು ಶಾರುಖ್ ಹೇಳಿಕೊಂಡಿದ್ದಾರೆ. ಅದರ ಜತೆಗೆ ತಮ್ಮ ತಂಡಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ.
‘ಇಷ್ಟು ದಿನ ಮನರಂಜಿಸಿದ್ದಕ್ಕಾಗಿ ಧನ್ಯವಾದಗಳು. ಎಲ್ಲರೂ ಚೆನ್ನಾಗಿ ಆಡಿದ್ದೀರಿ. ನಾನು ನಗುತ್ತಲೇ ಇರುತ್ತೇನೆ’ ಎಂದು ಶಾರುಖ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆಕೆಆರ್ ಆಟಗಾರ ಕ್ರಿಸ್ ಲಿನ್ ನಿಮ್ಮಂಥಾ ಮಾಲಿಕ ನಮಗೆ ಸಿಕ್ಕಿರುವುದೇ ಸೌಭಾಗ್ಯ. ನಮಗಾಗಿ ಎರಡು ತಿಂಗಳು ಮೀಸಲಿಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.