Publish Date: Sun, 27 May 2018 (09:27 IST)
Updated Date: Sun, 27 May 2018 (09:29 IST)
ಹೈದರಾಬಾದ್: ಬಹುಶಃ ರಶೀದ್ ಖಾನ್ ಆಲ್ ರೌಂಡರ್ ಪ್ರದರ್ಶನ ನೀಡದೇ ಹೋಗಿರುತ್ತಿದ್ದರೆ ಈ ಐಪಿಎಲ್ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್ ತಂಡಕ್ಕೆ ಜಾಗವೇ ಸಿಗುತ್ತಿರಲಿಲ್ಲವೇನೋ.
10 ಬಾಲ್ ಗಳಲ್ಲಿ 34 ರನ್ ಹಾಗೂ 3 ವಿಕೆಟ್, ಒಂದು ರನೌಟ್ ಮಾಡಿದ್ದ ರಶೀದ್ ಖಾನ್ ಅಫ್ಘಾನಿಸ್ತಾನದ ಅಧ್ಯಕ್ಷರಿಂದಲೂ ಹೊಗಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಶೀದ್ ಸಾಹಸಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕೂಡಾ ತಲೆದೂಗಿದ್ದಾರೆ.
ತಮ್ಮ ಟ್ವಿಟರ್ ಪೇಜ್ ನಲ್ಲಿ ರಶೀದ್ ಖಾನ್ ರನ್ನು ಹೊಗಳಿರುವ ಸಚಿನ್ ಸದ್ಯಕ್ಕೆ ಟಿ20 ಫಾರ್ಮ್ಯಾಟ್ ನಲ್ಲಿ ಆತನೇ ಜಗತ್ತಿನ ಸರ್ವಶ್ರೇಷ್ಠ ಸ್ಪಿನ್ನರ್ ಎಂದು ಬಿರುದು ಕೊಟ್ಟಿದ್ದಾರೆ. ಇದಕ್ಕಿಂತ ದೊಡ್ಡ ಬಿರುದು ಸಮ್ಮಾನ ಬೇಕೇ?
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.