Select Your Language

Notifications

webdunia
webdunia
webdunia
webdunia

ಐಪಿಎಲ್ ಹೀರೋ ಶೇನ್ ವ್ಯಾಟ್ಸನ್ ಗೆ ಹೊಸ ಹೆಸರು ಕೊಟ್ಟ ಧೋನಿ

ಐಪಿಎಲ್ ಹೀರೋ ಶೇನ್ ವ್ಯಾಟ್ಸನ್ ಗೆ ಹೊಸ ಹೆಸರು ಕೊಟ್ಟ ಧೋನಿ
ಮುಂಬೈ , ಮಂಗಳವಾರ, 29 ಮೇ 2018 (08:43 IST)
ಮುಂಬೈ: ಭಾನುವಾರ ಐಪಿಎಲ್ ಫೈನಲ್ ಪಂದ್ಯದಲ್ಲಿ ಸಂಕಟದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿರುಗಾಳಿಯಂತೆ ಸ್ಪೋಟಿಸಿ ಗೆಲುವಿನ ರೂವಾರಿಯಾದ ಶೇನ್ ವ್ಯಾಟ್ಸನ್ ಗೆ ನಾಯಕ ಧೋನಿ ಹೊಸ ಬಿರುದು ಕೊಟ್ಟಿದ್ದಾರೆ.

ತಮ್ಮ ತಂಡಕ್ಕೆ ಸಪೋರ್ಟ್ ಮಾಡಿದ ಮುಂಬೈ ವೀಕ್ಷಕರಿಗೆ ಇನ್ ಸ್ಟಾಗ್ರಾಂ ಮೂಲಕ ಧನ್ಯವಾದ ತಿಳಿಸಿರುವ ಧೋನಿ, ‘ಶೇನ್ ಶಾಕಿಂಗ್ ವ್ಯಾಟ್ಸನ್ ರ ಶಾಕಿಂಗ್ ಇನಿಂಗ್ಸ್ ನಮ್ಮನ್ನು ಗೆಲುವಿನ ದಡ ಮುಟ್ಟಿಸಿತು’ ಎಂದು ಹೊಗಳಿದ್ದಾರೆ.

ಆ ಮೂಲಕ ಆಸೀಸ್ ಮೂಲದ ಹೊಡೆಬಡಿಯ ಆಟಗಾರನಿಗೆ ಶಾಕಿಂಗ್ ಸ್ಟಾರ್ ಬಿರುದುಕೊಟ್ಟಿದ್ದಾರೆ. ಒಂದು ವೇಳೆ ಶೇನ್ ಈ ಪಂದ್ಯದಲ್ಲಿ ಸ್ಪೋಟಕ ಶತಕ ದಾಖಲಿಸದೇ ಇರುತ್ತಿದ್ದರೆ ಚೆನ್ನೈ ಚಾಂಪಿಯನ್ ಆಗುತ್ತಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ನಿಜವಾಗಿಯೂ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರೇ?