Publish Date: Fri, 01 Jun 2018 (08:52 IST)
Updated Date: Fri, 01 Jun 2018 (08:56 IST)
ನವದೆಹಲಿ: ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹ್ವಾಗ್ ಇಬ್ಬರೂ ಡೆಲ್ಲಿ ಡ್ಯಾಶರ್ ಗಳೇ. ಆದರೆ ಇದೀಗ ಟೀಂ ಇಂಡಿಯಾ ನಾಯಕ ಕೊಹ್ಲಿಗೇ ಸೆಹ್ವಾಗ್ ಶಾಕ್ ಕೊಟ್ಟಿದ್ದಾರೆ.
ಇದು ನಡೆದಿರುವುದು ಆನ್ ಲೈನ್ ಸಮೀಕ್ಷೆಯೊಂದರಿಂದ. ಯಾವ ಕ್ರಿಕೆಟಿಗನ ಟ್ವಿಟರ್ ಹೆಚ್ಚು ಆಕರ್ಷಕ, ಮನರಂಜನೆಯಿಂದ ಕೂಡಿರುತ್ತದೆ ಎಂಬ ಸಮೀಕ್ಷೆಯಲ್ಲಿ ಸೆಹ್ವಾಗ್ ಗೆ ವಿರಾಟ್ ಕೊಹ್ಲಿಗಿಂತ ಹೆಚ್ಚು ಅಂಕ ಸಿಕ್ಕಿದೆ. ಸಮೀಕ್ಷೆಯಲ್ಲಿ ಸೆಹ್ವಾಗ್ ಶೇ. 56 ವೋಟ್ ಗಳನ್ನು ಪಡೆದಿದ್ದರು. ಕೊಹ್ಲಿ ಟ್ವಿಟರ್ ಖಾತೆಗೆ ಕೇವಲ ಶೇ.11 ರಷ್ಟು ಅಂಕ ಬಂದಿದೆ.
ಇನ್ನು ವೀಕ್ಷಕ ವಿವರಣೆಕಾರರ ಪೈಕಿ ಯಾರು ಹೆಚ್ಚು ಆಸಕ್ತಿದಾಯಕವಾಗಿ ಕಾಮೆಂಟರಿ ಮಾಡುತ್ತಾರೆ ಎಂಬ ಪ್ರಶ್ನೆಗೆ ವೀಕ್ಷಕರು ಹರ್ಷ ಭೋಗ್ಲೆಗೆ ಹೆಚ್ಚು ವೋಟ್ ಹಾಕಿದ್ದಾರೆ. ಅವರ ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್ ನ ಡ್ಯಾನಿ ಮೋರಿಸನ್ ಮತ್ತು ಭಾರತದ ಆಕಾಶ್ ಚೋಪ್ರಾ ಇದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.