Publish Date: Sat, 26 May 2018 (08:54 IST)
Updated Date: Sat, 26 May 2018 (08:55 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ಕೌಂಟಿ ಕ್ರಿಕೆಟ್ ಆಡುವುದರಿಂದ ಹಿಂದೆ ಸರಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೋಚ್ ರವಿಶಾಸ್ತ್ರಿ ಸಿಟ್ಟಿಗೆದ್ದಿದ್ದಾರೆ.
ಇಂಗ್ಲೆಂಡ್ ಸರಣಿಗೆ ತಯಾರಾಗುವ ಉದ್ದೇಶದಿಂದ ವಿರಾಟ್ ಕೌಂಟಿ ಕ್ರಿಕೆಟ್ ಆಡಲು ನಿರ್ಧರಿಸಿ ಸರ್ರೆ ಜತೆಗೆ ಒಂದು ತಿಂಗಳ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಐಪಿಎಲ್ ಸಂದರ್ಭದಲ್ಲಿ ಗಾಯಕ್ಕೆ ತುತ್ತಾದ ಕೊಹ್ಲಿ ಇದೀಗ ಆಡುವುದೇ ಅನುಮಾನವಾಗಿದೆ.
ಈ ಬಗ್ಗೆ ಮಾಧ್ಯಮಗಳು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಯನ್ನು ಪ್ರಶ್ನಿಸಿದಾಗ ‘ವಿರಾಟ್ ಕೊಹ್ಲಿ ರನ್ ಮೆಷಿನ್ ಅಲ್ಲ, ಸಾಮಾನ್ಯ ಮನುಷ್ಯ. ಅವರನ್ನು ಮತ್ತೆ ಮೈದಾನಕ್ಕೆ ಇಳಿಸಲು ಯಾವುದೋ ರಾಕೆಟ್ ಸೈನ್ಸ್ ತಂತ್ರಜ್ಞಾನದ ಇಂಧನ ಬಳಸಿ ಸಿದ್ಧ ಮಾಡಲಾಗದು’ ಎಂದು ಖಡಕ್ ಆಗಿಯೇ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.