Publish Date: Fri, 25 May 2018 (08:38 IST)
Updated Date: Fri, 25 May 2018 (08:40 IST)
ಮುಂಬೈ; ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡಲು ಹೊರಟಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಿರೀಕ್ಷಿಸಿರದ ಆಘಾತ ಸಿಕ್ಕಿದೆ.
ಕೆಲವು ಮೂಲಗಳ ಪ್ರಕಾರ ಬೆನ್ನು ಅಥವಾ ಕತ್ತಿಗೆ ಸಂಬಂಧಿಸಿದ ನೋವಿಗೆ ತುತ್ತಾಗಿರುವ ಕೊಹ್ಲಿ ಕೌಂಟಿ ಕ್ರಿಕೆಟ್ ಆಡುವುದು ಅನುಮಾನವಾಗಿದೆ. ನಿನ್ನೆಯಷ್ಟೇ ಕೊಹ್ಲಿ ಮುಂಬೈನ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದಾರೆ.
ಆದರೆ ಬಿಸಿಸಿಐ ಮೂಲಗಳ ಪ್ರಕಾರ ಕೊಹ್ಲಿ ಕುತ್ತಿಗೆ ನೋವಿನಿಂದ ಬಳಲುತ್ತಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಕೌಂಟಿ ಕ್ರಿಕೆಟ್ ನಲ್ಲಿ ಕೆಲವು ಪಂದ್ಯಗಳನ್ನಾದರೂ ಅವರು ಆಡುತ್ತಾರೆ ಎನ್ನಲಾಗಿದೆ. ಹಾಗಿದ್ದರೂ ಬಿಡುವಿಲ್ಲದ ಐಪಿಎಲ್ ವೇಳಾಪಟ್ಟಿಯಿಂದ ಸುಸ್ತಾಗಿರುವ ಕೊಹ್ಲಿ ಇದೀಗ ಬಳಲಿಕೆಯಿಂದ ದೈಹಿಕ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಿದ್ದರೂ ಇಂಗ್ಲೆಂಡ್ ಸರಣಿಯ ಮಹತ್ವದ ಹಿನ್ನಲೆಯಲ್ಲಿ ಕೊಹ್ಲಿ ಬೇಗ ಚೇತರಿಸಿಕೊಳ್ಳಬೇಕಾದ ಅಗತ್ಯವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.