Publish Date: Wed, 23 May 2018 (10:02 IST)
Updated Date: Wed, 23 May 2018 (10:04 IST)
ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ವಿವಾಹವಾಗಿರುವ ವಿರಾಟ್ ಕೊಹ್ಲಿ ತಮ್ಮಿಬ್ಬರಿಗೆ ಹುಟ್ಟಲಿರುವ ಮಕ್ಕಳ ಬಗ್ಗೆ ಮಾತನಾಡಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ದೂರದ ಇಟೆಲಿಯಲ್ಲಿ ಮದುವೆಯಾಗಿದ್ದ ಈ ಜೋಡಿ ಅಭಿಮಾನಿಗಳ ಹಾಟ್ ಫೇವರಿಟ್. ಇದೀಗ ಕೊಹ್ಲಿ ಸಂದರ್ಶನವೊಂದರಲ್ಲಿ ತಮ್ಮ ಮಕ್ಕಳು ಹೇಗಿರಬೇಕೆಂದು ಹೇಳಿಕೊಂಡಿದ್ದಾರೆ.
‘ಇಬ್ಬರೂ ಈಗ ಸೆಲೆಬ್ರಿಟಿಯಾಗಿ ಸ್ಥಾನ ಮಾನ ಹೊಂದಿರಬಹುದು. ಆದರೆ ಇದೆಲ್ಲಾ ಶಾಶ್ವತ ಅಲ್ಲ. ಒಂದು ದಿನ ಇದೆಲ್ಲಾ ನಿಂತು ಹೋಗುತ್ತದೆ. ಹಾಗಾಗಿ ನಮ್ಮ ಮನೆಯಲ್ಲಿ ನಾನು ನನ್ನ ಪದಕಗಳು, ಸಾಧನೆಗಳ ಫಲಕಗಳನ್ನು ಇಡಲು ಬಯಸುವುದಿಲ್ಲ. ನಮ್ಮ ಮಕ್ಕಳು ಸೆಲೆಬ್ರಿಟಿಗಳ ಮಕ್ಕಳಾಗಿ ಬೆಳೆಯುವುದು ಬೇಡ. ಸಾಮಾನ್ಯರಂತೇ ಇರಲಿ’ ಎಂದು ಕೊಹ್ಲಿ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.