Select Your Language

Notifications

webdunia
webdunia
webdunia
Wednesday, 16 April 2025
webdunia

ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ ನಟಿ ಮಾಜಿ ಭುವನದ ಸುಂದರಿ ಸುಷ್ಮಿತಾ ಸೇನ್

ಲೈಂಗಿಕ ಕಿರುಕುಳ
ಮುಂಬೈ , ಬುಧವಾರ, 23 ಮೇ 2018 (06:13 IST)
ಮುಂಬೈ : ಇತ್ತೀಚೆಗೆ ಸಿನಿಮಾ ನಟಿಯರು ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದು ಅದೇರೀತಿ ಇದೀಗ ಬಾಲಿವುಡ್ ನಟಿ ಮಾಜಿ ಭುವನದ ಸುಂದರಿ ಸುಷ್ಮಿತಾ ಸೇನ್ ಗೆ ಇಂತಹದ್ದೊಂದು ಅನುಭವಾಗಿದ್ದು, ಈ ಕುರಿತಂತೆ ನಟಿ ಬೇಸರ ವ್ಕಕ್ತಪಡಿಸಿದ್ದಾರೆ.


ಇತ್ತೀಚೆಗೆ ನಟಿ ಸುಶ್ಮೀತಾ ಸೇನ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ತಮಗಾದ ಅನುಭವದ ಬಗ್ಗೆ ಹೇಳಿದ್ದಾರೆ. ನಮ್ಮ ಸುತ್ತಾ 10 ಮಂದಿ ಬಾಡಿಗಾರ್ಡ್ ಗಳಿದ್ದರೂ ಕೂಡ, ಕೆಲವರು ಹೇಗಾದರೂ ಮಾಡಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. 6 ತಿಂಗಳ ಹಿಂದೆ ತಾನು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಬಾಲಕನೊಬ್ಬ ನನ್ನ ಹಿಂದೆ ನಿಂತು ತಪ್ಪಾಗಿ ವರ್ತಿಸುತ್ತಿದ್ದ. ಆ ಗಲಾಟೆಯಲ್ಲಿ ನನಗೆ ಆತ ಯಾರೂ ಎಂದು ಗೊತ್ತಾಗಲಿಲ್ಲ. ಆದರೆ ಕೂಡಲೇ ಅತನ್ನು ಕೈಯನ್ನು ಹಿಡುಕೊಂಡು ಹಿಂದಿರುಗಿ ನೋಡಿದರೆ ನನಗೆ ಶಾಕ್ ಆತ ಇನ್ನೂ 15 ವರ್ಷದ ಹುಡುಗ. ಬಳಿಕ ನಾನು ಅವನಿಗೆ ಬುದ್ಧಿವಾದ ಹೇಳಿದೆ. ಅವನು ಕ್ಷಮೆಯಾಚಿಸಿದ ಅಷ್ಟೇ ಅಲ್ಲದೆ ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಭಾಷೆ ಕೊಟ್ಟ ನಾನು ಆತನ ಮೇಲೆ ದೂರು ದಾಖಲಿಸಲಿಲ್ಲ. ಯಾಕೆಂದರೆ ಆತನ ವಯಸ್ಸು ಕೂಡ ಅಂತಹದ್ದೆ. ಅದಕ್ಕಾಗಿ ಸುಮ್ಮನಾದೆ ಎಂದು ಸುಷ್ಮಿತಾ ಸೇನ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ರಾಧ ರಮಣ ಧಾರಾವಾಹಿಯ ನಾಯಕ ನಟ ಸ್ಕಂದ ಅಶೋಕ್