Select Your Language

Notifications

webdunia
webdunia
webdunia
webdunia

ಫೇಸ್ ಬುಕ್ ನಲ್ಲಿ ಅತ್ಯಂತ ಆಯಕ್ಟೀವ್ ಆಗಿರುವ ನಟರಲ್ಲಿ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಾಲಿವುಡ್ ನಟ ಯಾರು ಗೊತ್ತಾ?

ಫೇಸ್ ಬುಕ್ ನಲ್ಲಿ ಅತ್ಯಂತ ಆಯಕ್ಟೀವ್ ಆಗಿರುವ ನಟರಲ್ಲಿ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಾಲಿವುಡ್ ನಟ ಯಾರು ಗೊತ್ತಾ?
ಬೆಂಗಳೂರು , ಭಾನುವಾರ, 20 ಮೇ 2018 (10:29 IST)
ಮುಂಬೈ : ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಕ್ರಿಯವಾಗಿರುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಇದೀಗ ಭಾರತೀಯ ನಟರ ಪೈಕಿ ಫೇಸ್ ಬುಕ್ ನಲ್ಲಿ ಅತ್ಯಂತ ಆಯಕ್ಟೀವ್ ಆಗಿರುವ ನಟರಲ್ಲಿ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಗ್ಲೋಬಲ್ ಟೆಕ್ ಕಂಪೆನಿ ಎಲ್ಲಾ ಭಾಷೆಗಳ ಮಾಧ್ಯಮವನ್ನು ಸರ್ವೆ ಮಾಡಿ ವಾರಕ್ಕೊಮ್ಮೆ ತನ್ನ ವರದಿ ನೀಡುತ್ತದೆ. ಇದರನ್ವಯ ಫೇಸ್ ಬುಕ್ ನಲ್ಲಿ ಅತ್ಯಂತ ಆಯಕ್ಟೀವ್ ಆಗಿರುವ ಹಾಗೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ನಟ  ಅಮಿತಾಬ್ ಬಚ್ಚನ್ ಅವರು ಎಂಬುದಾಗಿ ತಿಳಿದುಬಂದಿದೆ.


ಅಮಿತಾಬ್ ಅವರನ್ನು ಫೇಸ್ ಬುಕ್ ಪೇಜ್ ನಲ್ಲಿ 300 ಮಿಲಿಯನ್ ಅಭಿಮಾನಿಗಳು ಫಾಲೋ ಮಾಡುತ್ತಿದ್ದು, ಇವರು ಮೊದಲ ಸ್ಥಾನದಲ್ಲಿದ್ದರೆ, ಸಲ್ಮಾನ್ ಖಾನ್ 95 ಪಾಯಿಂಟ್ ಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಶಾರೂಖ್ ಖಾನ್ 68 ಪಾಯಿಂಟ್ ಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರೆ, ರಣ್ ವೀರ್ ಸಿಂಗ್ ನಾಲ್ಕನೆ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ ಐದನೇ ಸ್ಥಾನದಲ್ಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಾಮೀನಿನ ಮೇಲೆ ಹೊರಬಂದ ಸುನಾಮಿ ಕಿಟ್ಟಿ