Publish Date: Thu, 24 May 2018 (09:10 IST)
Updated Date: Thu, 24 May 2018 (09:13 IST)
ನವದೆಹಲಿ: ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಚಾಲೆಂಜ್ ಒಂದು ಇದೀಗ ಕ್ರೀಡಾ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ನೇರವಾಗಿ ಪ್ರಧಾನಿ ಮೋದಿಗೇ ಸವಾಲು ಹಾಕಿದ್ದಾರೆ. ಅಂತಹದ್ದೇನು ಎಂಬ ಕುತೂಹಲವಿದ್ದರೆ ಈ ಸುದ್ದಿ ಓದಿ!
ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೊಸ ಫಿಟ್ ನೆಸ್ ಚಾಲೆಂಜ್ ಅಭಿಯಾನವೊಂದನ್ನು ಆರಂಭಿಸಿದ್ದರು. ಸ್ವತಃ ಕ್ರೀಡಾಳುವಾಗಿರುವ ಸಚಿವ ರಾಥೋಡ್ ಫಿಟ್ ನೆಸ್ ಟ್ರೈನಿಂಗ್ ಮಾಡುವ ವಿಡಿಯೋ ಪೋಸ್ಟ್ ಮಾಡಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸವಾಲು ಸ್ವೀಕರಿಸುವಂತೆ ಆಹ್ವಾನಿಸಿದ್ದರು.
ಅದರಂತೆ ಕೇಂದ್ರ ಸಚಿವರ ಸವಾಲು ಸ್ವೀಕರಿಸಿದ ಕೊಹ್ಲಿ ತಾವು ಟ್ರೈನಿಂಗ್ ಮಾಡುವ ವಿಡಿಯೋ ಹಾಕಿದ್ದಲ್ಲದೆ, ಪ್ರಧಾನಿ ಮೋದಿ, ತಮ್ಮ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಧೋನಿಗೆ ಸವಾಲು ಸ್ವೀಕರಿಸಲು ಆಹ್ವಾನಿಸಿದ್ದಾರೆ. ಇದೀಗ ಈ ಮೂವರು ಕೊಹ್ಲಿ ಸವಾಲು ಸ್ವೀಕರಿಸುತ್ತಾರಾ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.