Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ನಾಯಕ, ಆದರೆ ಕೊಹ್ಲಿಗೆ ಕ್ಯಾಪ್ಟನ್ ಯಾರು ಗೊತ್ತಾ?!

ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ನಾಯಕ, ಆದರೆ ಕೊಹ್ಲಿಗೆ ಕ್ಯಾಪ್ಟನ್ ಯಾರು ಗೊತ್ತಾ?!
ಮುಂಬೈ , ಮಂಗಳವಾರ, 22 ಮೇ 2018 (08:52 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿಯೇ ನಾಯಕ. ಧೋನಿ ನಂತರ  ಅವರೇ ಸಕ್ಸಸ್ ಫುಲ್ ಕ್ಯಾಪ್ಟನ್. ಆದರೆ ಕೊಹ್ಲಿ ಪಾಲಿಗೆ ಕ್ಯಾಪ್ಟನ್ ಯಾರು ಗೊತ್ತಾ?!

ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಅಂತೆ! ಹಾಗಂತ ವಿರಾಟ್ ಹೇಳಿಕೊಂಡಿದ್ದಾರೆ. ಮೈದಾನದಲ್ಲಿ ನಾನು ನಾಯಕನಿರಬಹುದು ಆದರೆ ಮನೆಯಲ್ಲಿ ಅವಳೇ ಕ್ಯಾಪ್ಟನ್ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಕೊಹ್ಲಿಗೆ ಮನೆಯಲ್ಲಿ ಯಾರು ಕ್ಯಾಪ್ಟನ್ ಎಂದು ಕೇಳಿದಾಗ ನಗುತ್ತಲೇ ಉತ್ತರಿಸಿ ಕೊಹ್ಲಿ ‘ಖಂಡಿತವಾಗಿಯೂ ನಮ್ಮ ಮನೆಯಲ್ಲಿ ಅವಳೇ ಕ್ಯಾಪ್ಟನ್. ಅವಳು ನಮ್ಮ ಜೀವನದ ಹಲವು ವಿಚಾರಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾಳೆ. ಅವಳು ನನ್ನ ಶಕ್ತಿ. ನನ್ನನ್ನು ಯಾವಾಗಲೂ ಸಕಾರಾತ್ಮಕವಾಗಿ ಇರಿಸುತ್ತಾಳೆ. ಅಂತಹ ಸಂಗಾತಿಯನ್ನೇ ಎಲ್ಲರೂ ಬಯಸುತ್ತಾರೆ. ಹಾಗಾಗಿ ನಾನು ತುಂಬಾ ಅದೃಷ್ಟಶಾಲಿ’ ಎಂದು ಮುದ್ದಿನ ಮಡದಿಯನ್ನು ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹೇಂದ್ರ ಸಿಂಗ್‌ ದೋನಿ ಬ್ಯಾಡ್ಮಿಂಟನ್‌ ಆಟಗಾರ ಶ್ರೀಕಾಂತ್‌ ಗೆ ನೀಡಿದ ಉಡುಗೊರೆ ಏನು....?