Publish Date: Thu, 17 May 2018 (09:18 IST)
Updated Date: Thu, 17 May 2018 (09:19 IST)
ಸಿಡ್ನಿ: ಭಾರತೀಯ ಕ್ರಿಕೆಟಿಗರು ವಿಶ್ವದೆಲ್ಲೆಡೆ ಆಡಿ ಸೈ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಮಾತ್ರ ಟೀಂ ಇಂಡಿಯಾವನ್ನು ಸ್ವಾರ್ಥಿ ಎಂದು ಲೇವಡಿ ಮಾಡಿದ್ದಾರೆ.
ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡಲು ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಹ್ವಾನ ನೀಡಿತ್ತು. ಆದರೆ ಅದನ್ನು ಟೀಂ ಇಂಡಿಯಾ ತಿರಸ್ಕರಿಸಿತ್ತು. ಇದೇ ಕಾರಣಕ್ಕೆ ಟೀಂ ಇಂಡಿಯಾವನ್ನು ಸ್ವಾರ್ಥಿ ಎಂದು ಮಾರ್ಕ್ ವಾ ಟೀಕಿಸಿದ್ದಾರೆ.
ಭಾರತ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆಡಲು ಒಪ್ಪಿದ್ದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸದೊಂದು ಶಕೆ ಆರಂಭವಾಗುತ್ತಿತ್ತು. ಆದರೆ ಅದು ನಿರಾಕರಿಸುವ ಮೂಲಕ ತನಗೆ ಪಿಂಕ್ ಬಾಲ್ ನಲ್ಲಿ ಅನುಭವದ ಕೊರತೆ ಇದೆ ಎಂದು ಒಪ್ಪಿಕೊಂಡಿದೆ. ಇದು ಅದರ ಸ್ವಾರ್ಥ ಮನೋಭಾವದ ಪ್ರತೀಕ’ ಎಂದು ಮಾರ್ಕ್ ವಾ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.