ನವದೆಹಲಿ: ಐಪಿಎಲ್ ಶ್ರೀಮಂತ ಕ್ರೀಡೆ ಎನ್ನುವುದು ಕೇವಲ ಸಂಭಾವನೆ ವಿಚಾರಕ್ಕೆ ಮಾತ್ರವಲ್ಲ. ಶಿಕ್ಷೆ ವಿಚಾರದಲ್ಲೂ ಐಪಿಎಲ್ ದುಬಾರಿಯೇ.
									
			
			 
 			
 
 			
					
			        							
								
																	ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡ ನಿಧಾನಗತಿಯ ಓವರ್ ಮಾಡಿದ್ದಕ್ಕೆ 12 ಲಕ್ಷ ರೂ.ಗಳ ದಂಡ ಹಾಕಿಸಿಕೊಂಡಿದ್ದರು. ಇದೀಗ ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯಾ ರೆಹಾನೆ ಸರದಿ.
									
										
								
																	ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ನಿಧಾನಗತಿಯ ಓವರ್ ಮಾಡಿದ್ದಕ್ಕೆ ನಾಯಕ ರೆಹಾನೆಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಈ ಪಂದ್ಯವನ್ನು ರಾಜಸ್ಥಾನ್ 7 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.