Publish Date: Sun, 13 May 2018 (08:17 IST)
Updated Date: Sun, 13 May 2018 (08:20 IST)
ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಗೆಲುವು ಸಾಧಿಸಲು ಯಶಸ್ವಿಯಾಗಿದೆ
ಇದರಿಂದಾಗಿ ನಿರ್ಣಾಯಕ ಪಂದ್ಯದಲ್ಲಿ ಗೆದ್ದು, ಆಸೆ ಜೀವಂತವಾಗಿಸಿದೆ. 182 ರನ್ ಗಳ ಚೇಸ್ ಮಾಡಲು ಹೊರಟ ಆರ್ ಸಿಬಿ ನೆರವಿಗೆ ಬಂದಿದ್ದು, ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಜೋಡಿ.
ಈ ಗೆಳೆಯರ ಜತೆಯಾಟದಿಂದಾಗಿ ಆರ್ ಸಿಬಿ 5 ವಿಕೆಟ್ ಗಳ ಗೆಲುವು ಸಾಧಿಸಿತು. ಕೊಹ್ಲಿ 40 ಬಾಲ್ ಗಳಲ್ಲಿ 70 ರನ್ ಸಿಡಿಸಿದರೆ ವಿಲಿಯರ್ಸ್ 37 ಬಾಲ್ ಗಳಲ್ಲಿ 72 ರನ್ ಚಚ್ಚಿದರು. ಬಹುಶಃ ಇವರಿಬ್ಬರೂ ಜತೆಯಾಟವಾಡದೇ ಇದ್ದಿದ್ದರೆ ನಿನ್ನೆಯೇ ಆರ್ ಸಿಬಿ ಗಂಟು ಮೂಟೆ ಕಟ್ಟಿಕೊಳ್ಳಬೇಕಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.