Publish Date: Sun, 13 May 2018 (07:39 IST)
Updated Date: Sun, 13 May 2018 (07:42 IST)
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿರ್ಣಾಯಕ ಪಂದ್ಯ ಆಡುವುದಕ್ಕೂ ಮೊದಲು ನಾಯಕ ವಿರಾಟ್ ಕೊಹ್ಲಿ ಅಕ್ಷರಶಃ ಶಾಕ್ ನೀಡಿದ್ದರು.
ಈ ಪಂದ್ಯಕ್ಕೂ ಮೊದಲು ಕೊಹ್ಲಿ ಅಸ್ವಸ್ಥರಾಗಿದ್ದರು. ಇದರಿಂದಾಗಿ ಅವರು ನಿರ್ಣಾಯಕ ಪಂದ್ಯದಲ್ಲೇ ಆಡುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಆದರೆ ಅಂತಿಮವಾಗಿ ಕೊಹ್ಲಿ ಪಂದ್ಯದ ವೇಳೆ ಸಿದ್ಧರಾಗಿ ಬಂದರು.
ತಮ್ಮ ತವರು ದೆಹಲಿಯಲ್ಲೇ ನಡೆಯುವ ಪಂದ್ಯಕ್ಕೆ ಕೊಹ್ಲಿ ಮೊದಲೇ ಇಲ್ಲಿಗೆ ಆಗಮಿಸಿದ್ದರು. ಆದರೆ ತವರಿಗೆ ಬಂದ ತಕ್ಷಣ ಅವರು ಅಸ್ವಸ್ಥರಾಗಿದ್ದರು. ಇದರಿಂದಾಗಿ ಅಭ್ಯಾಸವನ್ನೂ ತಪ್ಪಿಸಿಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.