Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗನಾಗಿರುವುದರ ಗುಟ್ಟೇನು ಗೊತ್ತಾ?

ವಿರಾಟ್ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗನಾಗಿರುವುದರ ಗುಟ್ಟೇನು ಗೊತ್ತಾ?
ಬೆಂಗಳೂರು , ಶುಕ್ರವಾರ, 11 ಮೇ 2018 (09:06 IST)
ಬೆಂಗಳೂರು: ಜಾಗತಿಕ ಕ್ರಿಕೆಟ್ ನ ಪ್ರಸಕ್ತ ಕ್ರಿಕೆಟಿಗರ ಪೈಕಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿದ್ದಾರೆ. ಅವರು ಇಷ್ಟೊಂದು ಯಶಸ್ಸು ಸಾಧಿಸಲು ಕಾರಣವೇನೆಂದು ಆರ್ ಸಿಬಿ ಕೋಚ್ ಗ್ಯಾರಿ ಕಸ್ಟರ್ನ್ ಹೇಳಿದ್ದಾರೆ.

ಸದಾ ಕ್ರಿಕೆಟ್ ಬಗ್ಗೆ ಧ್ಯಾನ. ಹೊಸದನ್ನು ಕಲಿಯುವ ಉತ್ಸಾಹ ಮತ್ತು ತನ್ನ ಆಟವನ್ನು ಸುಧಾರಿಸುವ ಹಪ ಹಪಿಯಿಂದ ಕೊಹ್ಲಿ ಶ್ರೇಷ್ಠರಾಗಿದ್ದಾರೆ ಎಂದು ಕಸ್ಟರ್ನ್ ಹೊಗಳಿದ್ದಾರೆ. ವಿಶೇಷವೆಂದರೆ ಕಸ್ಟರ್ನ್ ಕೋಚ್ ಆಗಿದ್ದಾಗಲೇ ಕೊಹ್ಲಿ ಟೀಂ ಇಂಡಿಯಾಗೆ ಕಾಲಿಟ್ಟಿದ್ದರು.

ಇದೇ ಕಾರಣಕ್ಕೆ ಭಾರತದ ಮುಂಬರುವ ಇಂಗ್ಲೆಂಡ್ ಪ್ರವಾಸ ಹೆಚ್ಚು ಆಸಕ್ತಿದಾಯಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಕೊಹ್ಲಿ ಜತೆ ಕೆಲಸ ಮಾಡಲು ತಮಗೆ ಹೆಚ್ಚು ಇಷ್ಟವಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯಿಂದ ಕಲಿತ ವಿದ್ಯೆಯನ್ನು ಯಶಸ್ವಿಯಾಗಿ ಪ್ರಯೋಗಿಸಿ ಆ ಯುವ ಕ್ರಿಕೆಟಿಗ!