Publish Date: Wed, 09 May 2018 (08:44 IST)
Updated Date: Wed, 09 May 2018 (08:45 IST)
ಮುಂಬೈ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಯ್ಕೆ ನಡೆಸಲು ಮಾತುಕತೆ ಸಂದರ್ಭ ವಿರಾಟ್ ಕೊಹ್ಲಿ ತಮ್ಮ ಮೆಚ್ಚಿನ ಆಟಗಾರನನ್ನೇ ಆಯ್ಕೆ ಮಾಡಲು ಹಠ ಹಿಡಿದರೇ?
ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡಲು ಈ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ರವಿಚಂದ್ರನ್ ಅಶ್ವಿನ್ ಕೂಡಾ ಹಿಂದೆ ವಾರ್ಕ್ ಶೈರ್ ಕೌಂಟಿ ತಂಡದ ಪರ ಒಪ್ಪಂದ ಮಾಡಿಕೊಂಡಿದ್ದರೂ ಅದನ್ನು ನವೀಕರಿಸಿಲ್ಲ.
ಹೀಗಾಗಿ ಅಶ್ವಿನ್ ಅಫ್ಘಾನಿಸ್ತಾನ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗಿದ್ದರು. ಹಾಗಿದ್ದರೂ ಅವರ ಬದಲು ಯಜುವೇಂದ್ರ ಚಾಹಲ್ ಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಕೊಹ್ಲಿ ಹಠ ಹಿಡಿದಿದ್ದರು ಎನ್ನಲಾಗಿದೆ. ಆಫ್ರಿಕಾ ಸರಣಿಗೆ ಚಾಹಲ್ ರನ್ನು ಆಯ್ಕೆ ಮಾಡಿದ್ದರೂ ಅನುಭವ ಕಮ್ಮಿ ಎನ್ನುವ ಕಾರಣಕ್ಕೆ ಆಡಿಸಿರಲಿಲ್ಲ. ಆದರೆ ಅಫ್ಘಾನಿಸ್ತಾನ ಟೆಸ್ಟ್ ಗೆ ಅಶ್ವಿನ್ ರ ಬದಲು ಚಾಹಲ್ ಆಡಿಸಲು ಕೊಹ್ಲಿ ಸಲಹೆ ನೀಡಿದ್ದರು ಎನ್ನಲಾಗಿತ್ತು. ಆದರೆ ಆಯ್ಕೆಗಾರರು ಅಂತಿಮವಾಗಿ ಅನುಭವಿ ಅಶ್ವಿನ್ ಗೇ ಮಣೆ ಹಾಕಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.