Publish Date: Wed, 16 May 2018 (09:19 IST)
Updated Date: Wed, 16 May 2018 (09:26 IST)
ಪುಣೆ: ಟೀಂ ಇಂಡಿಯಾ ಕ್ರಿಕೆಟಿಗ, ಸಿಎಸ್ ಕೆ ನಾಯಕ ಧೋನಿಗೆ ನಾಯಿಗಳೆಂದರೆ ಪಂಚಪ್ರಾಣ. ನಾಯಿಗಳ ಮೇಲೆ ಅಪಾರ ಕರುಣೆ ಹೊಂದಿರುವ ಧೋನಿಯನ್ನು ಕಂಡು ಇದೀಗ ಒಂದು ನಾಯಿಯೇ ಸೆಲ್ಯೂಟ್ ಮಾಡಿತು.
ಭಾನುವಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಪಂದ್ಯ ಪುಣೆಯಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಭದ್ರತಾ ಪಡೆಯ ಅಧಿಕಾರಿಗಳ ಜತೆಗಿದ್ದ ನಾಯಿಯನ್ನು ನೋಡಿ ಧೋನಿ ಮೈದಡವಿ ಮುದ್ದಾಡಿದರು.
ಅದಾದ ಬಳಿಕ ನಾಯಿ ಶಿಸ್ತಾಗಿ ಮಂಡಿಯೂರಿ ಧೋನಿಗೆ ನಮಸ್ಕರಿಸಿತು. ಜತೆಗೆ ನಾಯಿಯನ್ನು ಹಿಡಿದುಕೊಂಡಿದ್ದ ಭದ್ರತಾ ಸಿಬ್ಬಂದಿಯೂ ಸೆಲ್ಯೂಟ್ ಮಾಡಿದರು. ನಾಯಿಯ ಸೆಲ್ಯೂಟ್ ಪರಿಗೆ ಧೋನಿ ಕೆಲ ಕ್ಷಣ ಮೂಕ ವಿಸ್ಮಿತರಾದರು.ಇದರ ವಿಡಿಯೋ ಲಿಂಕ್ ಇಲ್ಲಿದೆ ನೋಡಿ..
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.