Publish Date: Wed, 16 May 2018 (09:27 IST)
Updated Date: Wed, 16 May 2018 (09:28 IST)
ಬೆಂಗಳೂರು: ಐಪಿಎಲ್ ನಲ್ಲಿ ಆರ್ ಸಿಬಿ ಸೋತೇ ಹೋಯಿತು ಎಂದಾಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಕಮ್ ಬ್ಯಾಕ್ ಮಾಡಿದೆ.
ಈ ಗೆಲುವಿಗೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಕೊಹ್ಲಿಯ ಹೆಸರಿರುವ ಟಿ ಶರ್ಟ್ ಧರಿಸಿಕೊಂಡು ಫೋಟೋ ಪ್ರಕಟಿಸಿದ್ದ ಅನುಷ್ಕಾ ಅದರ ಜತೆಗೆ ‘ಕಮ್ ಆನ್ ಬಾಯ್ಸ್’ ಎಂದು ಚಿಯರ್ ಅಪ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ ‘ಹೌದು ಮೈ ಲವ್. ನಾವು ಇಂದು ಮತ್ತೆ ಬಂದಿದ್ದೇವೆ’ ಎಂದಿದ್ದಾರೆ. ಆರ್ ಸಿಬಿ ಗೆಲುವಿನಿಂದ ಅಭಿಮಾನಿಗಳೂ ಖುಷಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.