Publish Date: Fri, 18 May 2018 (08:57 IST)
Updated Date: Fri, 18 May 2018 (08:58 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಪರ ಆಡುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಖದಲ್ಲಿ ಸದಾ ಗಡ್ಡ ಬೆಳೆಸಿಕೊಂಡಿರುತ್ತಾರೆ.
ಹಿಂದೊಮ್ಮೆ ತಮ್ಮ ಪ್ರಿಯತಮೆ ಅನುಷ್ಕಾ ಶರ್ಮಾಗಾಗಿ ಗಡ್ಡ ತೆಗೆಯುವುದಿಲ್ಲ. ಆಕೆಗೆ ಗಡ್ಡವೆಂದರೆ ಇಷ್ಟ ಎಂದು ಕೊಹ್ಲಿ ಹೇಳಿಕೊಂಡಿದ್ದರು.
ಈಗ ಕಾರ್ಯಕ್ರಮವೊಂದರಲ್ಲಿ ಅವರಿಗೆ ಮತ್ತದೇ ಪ್ರಶ್ನೆ ಎದುರಾಗಿದೆ. ಯಾವಾಗ ಗಡ್ಡ ಬೋಳಿಸುತ್ತೀರಿ ಎಂದಿದ್ದಕ್ಕೆ ‘ಸದ್ಯಕ್ಕಂತೂ ಆ ಯೋಚನೆಯಿಲ್ಲ. ಇದು ನನಗೆ ಸೂಟ್ ಆಗುತ್ತದೆ. ಹೆಚ್ಚೆಂದರೆ ಸ್ವಲ್ಪ ಆಯಿಲ್ ಹಚ್ಚಬೇಕಾಗುತ್ತದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.