Publish Date: Fri, 18 May 2018 (09:49 IST)
Updated Date: Fri, 18 May 2018 (09:52 IST)
ಬೆಂಗಳೂರು: ಕರ್ನಾಟಕದ ರಾಜಕೀಯ ಗದ್ದಲಗಳ ನಡುವೆಯೂ ಪ್ರಧಾನಿ ಮೋದಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ್ದಾರೆ.
ಆದರೆ ಇದು ರಾಜಕೀಯ ವಿಚಾರಕ್ಕೆ ಮಾಡಿದ ಕರೆ ಅಲ್ಲ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಇಂದು ದೇವೇಗೌಡರ ಜನ್ಮದಿನ. ಅದೇ ಕಾರಣಕ್ಕೆ ಇಂದು ಪ್ರಧಾನಿ ಮೋದಿ, ಮಾಜಿ ಪ್ರಧಾನಿಗೆ ಮಾತನಾಡಿ ಶುಭಾಷಯ ಕೋರಿದ್ದಾರಂತೆ. ಅವರ ದೀರ್ಘಾಯುಷ್ಯ, ಆರೋಗ್ಯ ಸಿಗಲೆಂದು ಪ್ರಾರ್ಥಿಸಿದೆ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.