Select Your Language

Notifications

webdunia
webdunia
webdunia
webdunia

ನನ್ನನ್ನು ಖರೀದಿಸುವವರು ಇನ್ನೂ ಹುಟ್ಟಿಲ್ಲ: ಕುಮಾರಸ್ವಾಮಿ ಖಡಕ್ ನುಡಿ

ನನ್ನನ್ನು ಖರೀದಿಸುವವರು ಇನ್ನೂ ಹುಟ್ಟಿಲ್ಲ: ಕುಮಾರಸ್ವಾಮಿ ಖಡಕ್ ನುಡಿ
ಬೆಂಗಳೂರು , ಗುರುವಾರ, 17 ಮೇ 2018 (08:45 IST)
ಬೆಂಗಳೂರು: ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಬಾರದು. ಹಾಗೆ ಮಾಡಿದರೆ ಶಾಸಕರ ಖರೀದಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ ‘104 ಶಾಸಕರಿರುವ ಬಿಜೆಪಿಗೆ ಬಹುಮತ ಎಲ್ಲಿದೆ? 2008 ರಲ್ಲಿ ಬಿಜೆಪಿಯವರು ಏನು ಮಾಡಿದ್ದರು? ಈಗ ಮತ್ತೆ ಅವರಿಗೆ ಆಪರೇಷನ್ ಕಮಲ ಮಾಡಲು ಚಿತಾವಣೆ ಕೊಟ್ಟಂತಾಗುತ್ತದೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಅಲ್ಲದೆ ಶಾಸಕರನ್ನು ಖರಿದಿ ಮಾಡಲು ಹೊರಟಿರುವ ಬಿಜೆಪಿ ಮೇಲೆ ಕೆಂಡಾಮಂಡಲಾಗಿರುವ ಎಚ್ ಡಿಕೆ ನನ್ನನ್ನು ಖರೀದಿ ಮಾಡುವವರು ಈವರೆಗೂ ಹುಟ್ಟಿಲ್ಲ ಎಂದು ಗುಡುಗಿದ್ದಾರೆ. ಎರಡು ಮತ್ತು ಮೂರನೇ ಸ್ಥಾನ ಗಳಿಸಿದವರು ಮೈತ್ರಿ ಸರ್ಕಾರ ರಚಿಸಲು ಅವಕಾಶವಿದೆ. ಇದಕ್ಕೆ ಗೋವಾ, ದೆಹಲಿ ಉದಾಹರಣೆ. ಒಂದು ವೇಳೆ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟರೆ ನಾವು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ ಡಿಕೆಯೂ ಸಿಎಂ ಆಗಲ್ಲ, ಬಿಎಸ್ ವೈಯೂ ಆಗಲ್ಲ! ಹಾಗಿದ್ದರೆ ಇನ್ಯಾರು?!