Publish Date: Thu, 17 May 2018 (08:15 IST)
Updated Date: Thu, 17 May 2018 (08:17 IST)
ಬೆಂಗಳೂರು: ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ ಸುದ್ದಿ ಕೇಳಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಿಟ್ಟಿಗೆದ್ದಿದ್ದಾರೆ.
ತೀರಾ ಆಕ್ರೋಶದಿಂದಲೇ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಕುಮಾರಸ್ವಾಮಿಗೆ ಪತ್ರಕರ್ತರೊಬ್ಬರು ರೆಸಾರ್ಟ್ ರಾಜಕಾರಣ ಎಷ್ಟು ದಿನ ಮುಂದುವರಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಪ್ರಶ್ನೆ ಕೇಳಿ ಕೆಂಡಾಮಂಡಲರಾದ ಕುಮಾರಸ್ವಾಮಿ ಏನ್ರೀ ರೆಸಾರ್ಟ್ ರಾಜಕೀಯ ಅಂದರೆ? ನಮ್ಮಶಾಸಕರನ್ನು ನೀವು ಮಾಧ್ಯಮದವರು ರಕ್ಷಿಸುತ್ತೀರಾ? ಇವರು ಏನು ಬೇಕಾದರೂ ಮಾಡ್ತಾರೆ. ನಮ್ಮ ಶಾಸಕರನ್ನು ನಾವು ಬೀದಿಯಲ್ಲಿ ನಿಂತು ಕಾಪಾಡಿಕೊಳ್ಳಕಾಗುತ್ತಾ? ಅದಕ್ಕೆ ರೆಸಾರ್ಟ್ ರಾಜಕೀಯ ಅಂತೀರಲ್ಲಾ? ಎಂದು ಕುಮಾರಸ್ವಾಮಿ ಆವೇಶದಿಂದ ಮಾತನಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.