Publish Date: Fri, 25 May 2018 (08:34 IST)
Updated Date: Fri, 25 May 2018 (08:36 IST)
ಮುಂಬೈ: ಕ್ರೀಡಾ ವಲಯದಲ್ಲಿ ಇದೀಗ ಭಾರೀ ವೈರಲ್ ಆಗುತ್ತಿರುವ ಫಿಟ್ ನೆಸ್ ಚಾಲೆಂಜ್ ಇದೀಗ ಬಾಲಿವುಡ್ ಲೋಕಕ್ಕೂ ಕಾಲಿಟ್ಟಿದೆ.
ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸವಾಲು ಸ್ವೀಕರಿಸಿ ದೈಹಿಕ ಕಸರತ್ತು ಮಾಡುವ ವಿಡಿಯೋ ಪ್ರಕಟಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿಕ ಪ್ರಧಾನಿ ಮೋದಿ ಜತೆಗೆ ಪತ್ನಿ ಅನುಷ್ಕಾ ಶರ್ಮಾ ಹಾಗೂ ಧೋನಿಗೂ ಸವಾಲು ಸ್ವೀಕರಿಸಲು ಆಹ್ವಾನ ನೀಡಿದ್ದರು.
ಪತಿ ಕೊಹ್ಲಿಯ ಸವಾಲು ಸ್ವೀಕರಿಸಿದ ಅನುಷ್ಕಾ ಫಿಟ್ ನೆಸ್ ಗಾಗಿ ದೇಹ ದಂಡಿಸುತ್ತಿರುವ ವಿಡಿಯೋ ಪ್ರಕಟಿಸಿದ್ದು, ನಾನು ನಿನ್ನ ಸವಾಲು ಸ್ವೀಕರಿಸಿದೆ ಎಂದು ಕೊಹ್ಲಿಗೆ ಸಂದೇಶ ಕೊಟ್ಟಿರುವುದಲ್ಲದೆ, ಅಭಿಯಾನ ಆರಂಭಿಸಿದ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಗೂ ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಅನುಷ್ಕಾ ತಮ್ಮ ಗೆಳೆಯರಾದ ವರುಣ್ ಧವನ್ ಮತ್ತು ಸ್ಕ್ವಾಶ್ ಆಟಗಾರ್ತಿ, ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಪಲ್ಲಿಕಲ್ ಗೆ ಸವಾಲು ಸ್ವೀಕರಿಸಲು ಆಹ್ವಾನವಿತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.