ಮುಂಬೈ : ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಖ್ಯಾತ ನಟ, ನಿರ್ದೇಶಕ ಅರ್ಬಾಜ್ ಖಾನ್ ಅವರಿಗೆ ಥಾಣೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ದೇಶ ವಿದೇಶಗಳಲ್ಲಿ ಬೆಟ್ಟಿಂಗ್ ಮಾಡಿ ಇತ್ತೀಚೆಗಷ್ಟೆ ಪೊಲೀಸರ ಅತಿಥಿಯಾಗಿದ್ದ 42 ವರ್ಷದ ಸೂನ್ ಜಲಾನ್ ನನ್ನು ವಿಚಾರಣೆ ಮಾಡಿದ ವೇಳೆ ನಟ ಅರ್ಬಾಜ್ ಖಾನ್ ಅವರ ಹೆಸರು ಕೇಳಿ ಬಂದಿತ್ತು. ಆದಕಾರಣ ಥಾಣೆ ಅಪರಾಧ ವಿಭಾಗದ ಪೊಲೀಸರು ಹೇಳಿಕೆ ದಾಖಲಿಸಲು ಅರ್ಬಾಜ್ ಖಾನ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಹಾಗೇ ಪಂದ್ಯ ಒಂದರ ಬೆಟ್ಟಿಂಗ್ ನಲ್ಲಿ ಜಲಾನ್ ಅರ್ಬಾಜ್ ಜೊತೆ ಸೋತಿದ್ದನು. ಇದೇ ಕಾರಣಕ್ಕೆ ಅರ್ಬಾಜ್ ನನ್ನು ಹೆದರಿಸಿದ್ದನು ಎಂಬುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ