Select Your Language

Notifications

webdunia
webdunia
webdunia
webdunia

12 ವರ್ಷದ ಬಾಲಕಿ ಮೇಲೆ 22 ಜನ ಕಾಮುಕರಿಂದ 7 ತಿಂಗಳು ರೇಪ್

12 ವರ್ಷದ ಬಾಲಕಿ ಮೇಲೆ 22 ಜನ ಕಾಮುಕರಿಂದ 7 ತಿಂಗಳು ರೇಪ್
ಚೆನ್ನೈ , ಮಂಗಳವಾರ, 17 ಜುಲೈ 2018 (15:55 IST)
ನಗರದ ಪುರುಸೈವಕ್ಕಂ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ 22 ಜನ ಕಾಮುಕರು 12 ವರ್ಷದ ಬಾಲೆಯ ಮೇಲೆ ನಿರಂತರವಾಗಿ 7 ತಿಂಗಳುಗಳ ಕಾಲ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
ಅಪಾರ್ಟ್‌ಮೆಂಟ್‌ನಲ್ಲಿದ್ದ ಸೆಕ್ಯೂರಿಟಿ ಗಾರ್ಡ್, ಪ್ಲಂಬರ್ ಲಿಫ್ಟ್ ಆಪರೇಟರ್‌ಗಳು ಸೇರಿದಂತೆ ಒಟ್ಟು 22 ಜನ ಕಾಮುಕರು ಬಾಲೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ಕ್ರೂರ ಕಾಮುಕತೆಯನ್ನು ಮೆರೆದಿದ್ದಾರೆ.
 
12 ವರ್ಷದ ಬಾಲಕಿಗೆ ಮತ್ತು ಬರಿಸುವ ಔಷಧಿ ನೀಡಿದ ಕಾಮುಕರು ಆಕೆಯ ಮೇಲೆ ಅತ್ಯಾಚಾರವೆಸಗಿ ಅತ್ಯಾಚಾರವೆಸಗುತ್ತಿರುವ ವಿಡಿಯೋ ಚಿತ್ರಿಕರಿಸಿಕೊಂಡಿದ್ದಾರೆ. ಒಂದು ವೇಳೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದಲ್ಲಿ ಎಲ್ಲರಿಗೆ ವಿಡಿಯೋ ತೋರಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸುಮಾರು 7 ತಿಂಗಳುಗಳ ಕಾಲ ಬಾಲಕಿಗೆ ಬೆದರಿಸಿದ 22 ಜನ ಕಾಮುಕರು ಮನಬಂದಂತೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆರಂಭದಲ್ಲಿ ಸೆಕ್ಯೂರಿಟಿ ಗಾರ್ಡ್ ಅತ್ಯಾಚಾರವೆಸಗಿದ್ದಾನೆ. ನಂತರ ತನ್ನ ಎಲ್ಲಾ ಗೆಳೆಯರನ್ನು ಕರೆದುಕೊಂಡು ಬಂದು ಬಾಲಕಿಯ ಮೇಲೆ ಅತ್ಯಾಚಾರವೆಸಗುವಂತೆ ಪ್ರೇರೆಪಿಸಿದ್ದಾನೆ.
 
ದೆಹಲಿಯಲ್ಲಿ ಓದುತ್ತಿದ್ದ ಅಕ್ಕ ರಜೆಯ ಮೇಲೆ ಚೆನ್ನೈಗೆ ಬಂದಾಗ ಬಾಲಕಿ ತನ್ನ ಮೇಲೆ ನಡೆದ ಅತ್ಯಾಚಾರಗಳ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಸಹೋದರಿಯ ಮೇಲೆ ನಡೆದ ಘಟನೆಯಿಂದ ಗಾಬರಿಗೊಂಡು ಬಾಲಕಿಯ ಅಕ್ಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
 
ಬಾಲಕಿ ನೀಡಿದ ಆಧಾರದ ಮೇಲೆ ಪೊಲೀಸರು 18 ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ನಾಲ್ವರು ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂಗೆ ಸಪೋರ್ಟ ಮಾಡಿದ ಪುಟಾಣಿ ಹುಡುಗಿ ವಿಡಿಯೋ ವೈರಲ್!