Publish Date: Tue, 17 Jul 2018 (15:02 IST)
Updated Date: Tue, 17 Jul 2018 (15:06 IST)
ಕೊಡಗಿನ ಎಮ್ಮೆಮಾಡುವಿನಲ್ಲಿ ಯುವಕ ಸಿಎಂ ವಿರುದ್ಧ ಹೇಳಿದ ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ತವರು ಜಿಲ್ಲೆ ಹಾಸನದಲ್ಲಿ ಪುಟಾಣಿ ಹುಡುಗಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಸಿಎಂಗೆ ನಾವಿದ್ದೇವೆ ಅಳಬೇಡಿ. ನಿಮ್ಮ ಪರವಾಗಿದ್ದೇವೆ ಎಂದು ಹೇಳಿರುವ ಬಾಲಕಿಯ ವಿಡಿಯೋ ವೈರಲ್ ಆಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಳಲಿಗ್ರಾಮದ ಬಾಲಕಿಯ ವಿಡಿಯೋ ಇದಾಗಿದೆ. ಎಲ್ಲಾ ವಿಷವನ್ನ ನಾನೇ ಕುಡಿದು ವಿಷಕಂಠನಾಗಿ ಬದುಕುತ್ತಿದ್ದೇನೆ ಎಂದು ಸಿ.ಎಂ. ಹೇಳಿದ್ದರು. ಸಿಎಂ ಭಾವುಕಾರಗಿ ಕಣ್ಣೀರು ಹಾಕಿದ ಘಟನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಿ.ಎಂ. ತವರಿನ ಪುಟಾಣಿಯಿಂದ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಸಾಂತ್ವಾನ ಹೇಳಲಾಗಿದೆ. ನೀವು ಮಾಡಿರುವ ಸಾಲಮನ್ನಾ ನಮಗೆ ಬೇಡ ನಮಗೆ ಹೆಚ್ಚು ಮಳೆಯಾಗಿದೆ, ನೆಲ ಹಸಿರಾಗಿದೆ. ಉತ್ತಮ ಬೆಳೆಯಾಗುತ್ತಿದೆ ಎಂದು ಪುಟ್ಟ ಬಾಲಕಿ ಹೇಳಿದ್ದಾಳೆ. ನೀವು ಸಿಎಂ ಆದ ಬಳಿಕ ಸಾಕಷ್ಟು ಮಳೆಯಾಗಿ ಕೆರೆಕಟ್ಟೆಗಳು ತುಂಬಿವೆ. ನಮ್ಮ ಗ್ರಾಮಕ್ಕೆ ಬನ್ನಿ ಎಂದಿರುವ ಪುಟಾಣಿ.
ಮುಖ್ಯಮಂತ್ರಿ ಕುಮಾರಸ್ವಾಮಿಗಳೇ ಒಮ್ಮೆ ನಮ್ಮೂರಿಗೆ ಬಂದು ನೋಡಿ ನಾನು ಹುಟ್ಟಿದಾಗಿನಿಂದ ಮಳೆಯೇ ಆಗಿರಲಿಲ್ಲ. ಕೆರೆಗಳನ್ನು ತುಂಬಿದ್ದೇ ನೋಡಿರಲಿಲ್ಲ, ಆದರೀಗ ಎಲ್ಲಾ ಸುಭೀಕ್ಷವಾಗಿದೆ ಎಂದಿದ್ದಾಳೆ.