ಎಲ್ಪಿಜಿ ಸಬ್ಸಿಡಿಯಲ್ಲಿ ಹೊಸ ಬದಲಾವಣೆ ಮಾಡಲು ಹೊರಟ ನೀತಿ ಆಯೋಗ

ಮಂಗಳವಾರ, 17 ಜುಲೈ 2018 (11:55 IST)
ಬೆಂಗಳೂರು : ಎಲ್ಪಿಜಿ ಸಬ್ಸಿಡಿಯಲ್ಲಿ ಹೊಸ ಬದಲಾವಣೆಯನ್ನು ತರಲು ಮುಂದಾದ ನೀತಿ ಆಯೋಗ ಇದೀಗ ಎಲ್ಪಿಜಿ ಸಬ್ಸಿಡಿಯನ್ನು ಅಡುಗೆ ಸಬ್ಸಿಡಿಯೊಂದಿಗೆ ಬದಲಿಸುವ ಕುರಿತಾದ ಪ್ರಸ್ತಾಪವನ್ನು ಜಾರಿ ತರುವ ಬಗ್ಗೆ ಚಿಂತಿಸುತ್ತಿದೆ.


ಹಲವು ಕಡೆ ಜೈವಿಕ ಇಂಧನವನ್ನು ಬಳಸುವ ಜನರು ಹೆಚ್ಚಾಗಿ ಇರುವುದರಿಂದ ನೈಸರ್ಗಿಕ ಅನಿಲ ಬಳಸುವವರ ಜೊತೆಗೆ ಜೈವಿಕ ಇಂಧನವನ್ನು ಬಳಸುವ ಜನರಿಗೂ ಕೂಡ ಸಬ್ಸಿಡಿ ಪ್ರಯೋಜನ ಲಭ್ಯವಾಗಲಿ ಎಂಬ ಉದ್ದೇಶದಿಂದ  ನೀತಿ ಆಯೋಗ ಈ ಬದಲಾವಣೆಗೆ ಮುಂದಾಗಿದೆ.


ಅಡುಗೆ ಮಾಡಲು ಬಳಸಲಾಗುವ ಎಲ್ಲಾ ರೀತಿಯ ಇಂಧನಗಳ ಮೇಲೆ ಸಬ್ಸಿಡಿಗಳನ್ನು ಒದಗಿಸಬೇಕು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ, ಸರ್ಕಾರ ಎಲ್ಪಿಜಿ ಬಳಕೆದಾರರಿಗೆ ಸಬ್ಸಿಡಿಯನ್ನು ವಿಸ್ತರಿಸಿದೆ. ದೇಶದ ಹಲವಾರು ನಗರಗಳಲ್ಲಿ PNG ಬಳಸಲಾಗುತ್ತಿದೆ. ಇವರಿಗೂ ಕೂಡ ಸಬ್ಸಿಡಿ ವಿಸ್ತರಿಸಲಾಗುವುದು ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಮ್ಮ ಕಾರ್ಯಕ್ರಮದಲ್ಲಿ ದುರಂತಕ್ಕೀಡಾದವರ ಆಸೆ ಪೂರೈಸಿದ ಪ್ರಧಾನಿ ಮೋದಿ!