ತಮ್ಮ ಕಾರ್ಯಕ್ರಮದಲ್ಲಿ ದುರಂತಕ್ಕೀಡಾದವರ ಆಸೆ ಪೂರೈಸಿದ ಪ್ರಧಾನಿ ಮೋದಿ!

ಮಂಗಳವಾರ, 17 ಜುಲೈ 2018 (09:54 IST)
ನವದೆಹಲಿ: ಪಶ್ಚಿಮ ಬಂಗಾಲದಲ್ಲಿ ನಿನ್ನೆ ತಮ್ಮ ಸಾರ್ವಜನಿಕ ಸಮಾವೇಶದಲ್ಲಿ ಟೆಂಟ್ ಕುಸಿದು ಗಾಯಗೊಂಡವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದ ಪ್ರಧಾನಿ ಕಾರ್ಯಕ್ರಮದಲ್ಲಿ ಟೆಂಟ್ ಕುಸಿದು ಬಿದ್ದು 90 ಮಂದಿ ಗಾಯಗೊಂಡಿದ್ದರು. ಇವರನ್ನು ಸ್ಥಳೀಯ ಮಿಡ್ನಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಧಾನಿ ಭಾಷಣ ಮಾಡುತ್ತಿರುವಾಗಲೇ ದುರ್ಘಟನೆ ಸಂಭವಿಸಿತ್ತು.

ಪ್ರಧಾನಿ ಮೋದಿಯವರನ್ನು ಕಣ್ಣಾರೆ ನೋಡಲು ಟೆಂಟ್ ನ ಕಂಬವೇರಿದ ಪರಿಣಾಮ ಭಾರಕ್ಕೆ ಅದು ಕುಸಿಯಿತು ಎನ್ನಲಾಗಿದೆ. ಟೆಂಟ್ ಕುಸಿಯುತ್ತಿದ್ದುದನ್ನು ನೋಡಿದ ಪ್ರಧಾನಿ ಮೋದಿ ಕೂಡಲೇ ಅಲ್ಲಿಂದ ಕೆಳಗಿಳಿಯುವಂತೆ ಮನವಿ ಮಾಡಿರಲ್ಲದೆ, ಭದ್ರತಾ ಸಿಬ್ಬಂದಿಗೆ ನೆರವು ನೀಡಲು ಸೂಚಿಸಿದರು.

ಕಾರ್ಯಕ್ರಮ ಮುಗಿದ ಬಳಿಕ ನೇರವಾಗಿ ಆಸ್ಪತ್ರೆಗೆ ಭೇಟಿ ಮಾಡಿದ ಪ್ರಧಾನಿ ಮೋದಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಅಷ್ಟೇ ಅಲ್ಲ, ಮಹಿಳೆಯೊಬ್ಬರು ಹಸ್ತಾಕ್ಷರ ನೀಡುವಂತೆ ಕೋರಿದಾಗ ಆಸ್ಪತ್ರೆ ಸಿಬ್ಬಂದಿಯಿಂದ ಪೆನ್ನು ಪೇಪರ್ ಪಡೆದು ತಕ್ಷಣ ಆಕೆಯ ಆಸೆ ಪೂರೈಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸರ್ಜಿಕಲ್ ಸ್ಟ್ರೈಕ್ ಗೆ ರಾಹುಲ್ ಗಾಂಧಿಯನ್ನೂ ಕರೆದೊಯ್ಯಬೇಕಿತ್ತೇ? ಹೀಗೆಂದು ಪ್ರಶ್ನಿಸಿದವರು ಯಾರು ಗೊತ್ತಾ?!