Publish Date: Mon, 16 Jul 2018 (09:10 IST)
Updated Date: Mon, 16 Jul 2018 (09:11 IST)
ನವದೆಹಲಿ: ಪ್ರಧಾನಿ ಮೋದಿಗೆ ಇತಿಹಾಸದ ಬಗ್ಗೆ ಗೌರವವಿಲ್ಲ. ಅದು ಸಾಲದೆಂಬಂತೆ ತಮಗೆ ತೋಚಿದ ಹಾಗೆ ಇತಿಹಾಸ ತಿರುಚಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಮೋದಿಯ ಈ ಇದಮಿತ್ತಂ ಗುಣ ರಾಷ್ಟ್ರಕ್ಕೇ ಕಳವಳಕಾರಿಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಶುದ್ಧ ಸುಳ್ಳು ಮತ್ತು ತಪ್ಪಾದ ಅಂಕಿ ಅಂಶಗಳನ್ನು ನೀಡುತ್ತಾರೆ ಎಂದು ಪ್ರಧಾನಿ ವಿರುದ್ಧ ಅವರು ಆರೋಪ ಮಾಡಿದ್ದಾರೆ.
‘ಪ್ರಧಾನಿ ಹುದ್ದೆ ಎನ್ನುವುದು ಒಂದು ಪಕ್ಷಕ್ಕೆ ಸೀಮಿತವಲ್ಲ, ಇಡೀ ರಾಷ್ಟ್ರಕ್ಕೆ ಸೇರಿದುದು. ಅವರ ಪರಮ ಶತ್ರು ಕಾಂಗ್ರೆಸ್ ಇಡೀ ದೇಶವನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಗ್ಗೂಡಿಸಿತ್ತು ಮತ್ತು ನೇತೃತ್ವ ವಹಿಸಿತ್ತು’ ಎಂದು ಆನಂದ್ ಶರ್ಮಾ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.