Select Your Language

Notifications

webdunia
webdunia
webdunia
webdunia

ಆಗಸ್ಟ್ 15ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನದ ಮೇಲೆ ನಿಷೇಧ - ಗೋವಾ ಸಿಎಂ ಮನೋಹರ್ ಪರಿಕ್ಕರ್

ಆಗಸ್ಟ್ 15ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನದ ಮೇಲೆ ನಿಷೇಧ - ಗೋವಾ ಸಿಎಂ ಮನೋಹರ್ ಪರಿಕ್ಕರ್
ಗೋವಾ , ಮಂಗಳವಾರ, 17 ಜುಲೈ 2018 (12:20 IST)
ಗೋವಾ : ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ತಡೆಯುವ ಸಲುವಾಗಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಮಹತ್ವದ ಆದೇಶವೊಂದನ್ನ ಜಾರಿಗೊಳಿಸಲಿದ್ದಾರೆ.


ಆದಕಾರಣ ಆಗಸ್ಟ್ 15ರಿಂದ ಗೋವಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡೋದು ಶಿಕ್ಷಾರ್ಹ ಅಪರಾಧವಾಗಿದೆ. ಪಾದಚಾರಿ ಮಾರ್ಗ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡೋರಿಗೆ ಭಾರಿ ದಂಡವನ್ನ ವಿಧಿಸಲಾಗುತ್ತದೆ ಎಂದು ತಿಳಿಸುವುದರ ಮೂಲಕ ಸಾರ್ವಜನಿಕರಿಗೆ  ಖಡಕ್ ವಾರ್ನಿಂಗ್ ನೀಡಿದ್ದಾರೆ.


ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ಆರ್ಥಿಕಾಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಕ್ಕರ್ ಅವರು, ‘ಗೋವಾ ನಾಗರಿಕರು ಸಾಮಾಜಿಕ ಪ್ರಜ್ಞೆಯನ್ನ ಬೆಳೆಸಿಕೊಳ್ಳಬೇಕಿದೆ. ಪಾದಚಾರಿ ಮಾರ್ಗಗಳಿರೋದು ಮದ್ಯಪಾನ ಮಾಡೋರಿಗೋ , ಕಸ ಎಸೆಯುವವರಿಗೋ ಅಲ್ಲ. ಹಾಗಾಗಿ ಆಗಸ್ಟ್ 15ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನದ ಮೇಲೆ ನಿಷೇಧ ಹೇರಲಾಗ್ತಿದೆ. ಅಷ್ಟೇ ಅಲ್ಲ ಇದಕ್ಕಾಗಿ ಭಾರೀ ದಂಡವನ್ನು ವಿಧಿಸಲಾಗುತ್ತೆ. ಹಾಗೇ ಮದ್ಯಪಾನದ ಜೊತೆಗೆ ಪ್ಲಾಸ್ಟಿಕ್ ಬ್ಯಾಗ್ ಗಳ ಬಳಕೆಗೆ ವಿಧಿಸಿರುವ ದಂಡದ ಮೊತ್ತ 100 ರೂಪಾಯಿಯಿಂದ 2500 ರೂಪಾಯಿಗೆ ಹೆಚ್ಚಾಗಲಿದೆ.’ ಎಂದು ಹೇಳಿದ್ದಾರೆ.


ಮಾಂಡೋವಿ ನದಿಗೆ ಸಾರ್ವಜನಿಕರು ಎಸೆಯುತ್ತಿರುವ ಹೂವು ಮತ್ತಿತರ ಪ್ಲಾಸ್ಟಿಕ್ ತ್ಯಾಜ್ಯಗಳ ವಿರುದ್ಧವೂ ಪರಿಕ್ಕರ್ ಗರಂ ಆಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಂದೆ ತಾಯಿಯ ಮೇಲೆ ದೌರ್ಜನ್ಯ ಎಸಗುವವರಿಗೆ ಹೈಕೋರ್ಟ್ ನೀಡಿದೆ ಬಿಗ್ ಶಾಕ್