Publish Date: Thu, 12 Jul 2018 (09:11 IST)
Updated Date: Thu, 12 Jul 2018 (09:13 IST)
ನವದೆಹಲಿ: ಪ್ರಧಾನಿ ಮೋದಿಗೆ ಟಾಂಗ್ ನೀಡಲು ಗೋವಾ ಕಾಂಗ್ರೆಸ್ ಪ್ರಧಾನಿ ವಿದೇಶ ಪ್ರವಾಸದ ದಾಖಲೆಯನ್ನು ಗಿನ್ನೆಸ್ ರೆಕಾರ್ಡ್ ಬುಕ್ ಗೆ ಸೇರಿಸುವಂತೆ ಅಧಿಕೃತ ಪತ್ರ ಬರೆದಿದೆ.
ಪ್ರಧಾನಿ ಮೋದಿ ತಮ್ಮ ನಾಲ್ಕು ವರ್ಷದ ಅಧಿಕಾರವಧಿಯಲ್ಲಿ 41 ವಿದೇಶ ಯಾತ್ರೆ ಮಾಡಿ 52 ದೇಶಗಳನ್ನು ಸುತ್ತಿದ್ದಾರೆ. ಇದಕ್ಕಾಗಿ 355 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಇದನ್ನು ದಾಖಲೆ ಎಂದು ಪರಿಗಣಿಸುವಂತೆ ಗಿನ್ನೆಸ್ ರೆಕಾರ್ಡ್ ಬುಕ್ ಗೆ ಗೋವಾ ಕಾಂಗ್ರೆಸ್ ಪತ್ರ ಬರೆದಿದೆ.
‘ಪ್ರಧಾನಿ ಮೋದಿ ಈ ಮೂಲಕ ಯುವ ತಲೆಮಾರಿಗೆ ಮಾದರಿಯಾಗಿದ್ದಾರೆ. ಅವರಷ್ಟು ಯಾರೂ ಕೂಡಾ ವಿದೇಶ ಪ್ರವಾಸ ಮಾಡಿಲ್ಲ. ಈ ಮೂಲಕ ನಮ್ಮ ಪ್ರಧಾನಿ ನಮ್ಮ ದೇಶಕ್ಕಿಂತ ವಿದೇಶದಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ ಎಂಬುದು ತಿಳಿಸಬೇಕಿದೆ’ ಎಂದು ಗೋವಾ ಕಾಂಗ್ರೆಸ್ ಲೇವಡಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.