Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಗೆ ಅಳಿಯ ಸಿಕ್ಕಾಯ್ತು, ರಾಹುಲ್ ಗಾಂಧಿ ಮದುವೆಯಾದ್ರಂತೆ! ನಟಿ ರಮ್ಯಾ ವಿವಾದಿತ ಟ್ವೀಟ್ ಮಾಡಿದೆ ಸೆನ್ಸೇಷನ್!

ಪ್ರಧಾನಿ ಮೋದಿಗೆ ಅಳಿಯ ಸಿಕ್ಕಾಯ್ತು, ರಾಹುಲ್ ಗಾಂಧಿ ಮದುವೆಯಾದ್ರಂತೆ! ನಟಿ ರಮ್ಯಾ ವಿವಾದಿತ ಟ್ವೀಟ್ ಮಾಡಿದೆ ಸೆನ್ಸೇಷನ್!
ನವದೆಹಲಿ , ಬುಧವಾರ, 11 ಜುಲೈ 2018 (09:00 IST)
ನವದೆಹಲಿ: ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಅಧ್ಯಕ್ಷೆ ರಮ್ಯಾ ಮತ್ತೆ ವಿವಾದಿತ ಟ್ವೀಟ್ ಮೂಲಕ ಸುದ್ದಿಯಾಗಿದ್ದಾರೆ. ಜತೆಗೆ ತಾವೇ ಇಕ್ಕಟ್ಟಿಗೆ ಸಿಲುಕಿದ್ದಾರೆ.

ನಿನ್ನೆ ನಟಿ ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ರ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ರಾಖಿ ಸಾವಂತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಆ ಕಾರಿನ ಚಾಲಕನನ್ನು ತೋರಿಸಿ ಇವನೇ ನನ್ನ ಹುಡುಗ. ಅಮೆರಿಕಾದಲ್ಲಿ ಸಿಕ್ಕಿದ್ದಾನೆ. ಪ್ರಧಾನಿ ಮೋದಿ ಜೀ ಕೂಡಾ ಈ ವಿಡಿಯೋ ನೋಡ್ತಿರ್ತಾರೆ.  ನಾನು ನಟಿ ಅಲ್ವಾ? ಅದಕ್ಕೆ ಮೋದಿ ಜಿ ನನ್ನ ದೊಡ್ಡ ಫ್ಯಾನ್. ಮೋದಿ ಜೀ ನೋಡಿ ನಿಮ್ಮ ಅಳಿಯ ಸಿಕ್ಕಿದ್ದಾನೆ’ ಎಂದು ಟ್ವಿಟರ್ ವಿಡಿಯೋದಲ್ಲಿ ಹೇಳಿದ್ದರು.

ಇದನ್ನೇ ರಿಟ್ವೀಟ್ ಮಾಡಿದ ರಮ್ಯಾ ಮೋದಿ ಜೀ ನಿಮ್ಮ ಅಳಿಯ ಸಿಕ್ಕಾಯ್ತು ಎಂದು ಪ್ರಧಾನಿ ಮೋದಿ ಮತ್ತು ರಾಖಿ ಸಾವಂತ್ ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥ ತೇಜಿಂದರ್ ಪಾಲ್ ಸಿಂಗ್ ರಿಂದ ತಿರುಗೇಟು ಸಿಕ್ಕಿದೆ. ತೇಜಿಂದರ್ ತಮ್ಮ ಟ್ವಿಟರ್ ನಲ್ಲಿ ಓರ್ವ ಮಹಿಳೆ ನನಗೆ ರಾಹುಲ್ ಗಾಂಧಿ ಎಂದರೆ ಇಷ್ಟ. ಅವರನ್ನು ಮದುವೆಯಾಗಿದ್ದೇನೆ ಎನ್ನುವ ವಿಡಿಯೋ ಅಪ್ ಲೋಡ್ ಮಾಡಿ ಸೋನಿಯಾ ಜೀ ನಿಮ್ಮ ಸೊಸೆ ಸಿಕ್ಕಳು ಎಂದು ತಿರುಗೇಟು ನೀಡಿದ್ದಾರೆ.

ಟ್ವಿಟರ್ ನಲ್ಲಿ ಈ ರೀತಿ ಸುಖಾ ಸುಮ್ಮನೇ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ವಿವಾದಿತ ಟ್ವೀಟ್ ಹುಟ್ಟು ಹಾಕಿದ ರಮ್ಯಾಗೆ ಈಗ ಟ್ವಿಟರಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಒಬ್ಬರಂತೂ ಕಾಂಗ್ರೆಸ್ ನಲ್ಲಿ ಲೈಂಗಿಕ ಕಿರುಕುಳ ಮೇಲ್ವರ್ಗದಿಂದ, ತಳಮಟ್ಟದವರೆಗೂ ಇದೆ ಎನ್ನುವುದು ಇದರಿಂದ ಸಾಬೀತಾಯಿತು ಎಂದಿದ್ದಾರೆ. ಅಂತೂ ಏನೋ ಮಾಡಲು ಹೋಗಿ ರಮ್ಯಾ ಇನ್ನೇನೋ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಂಪ್ ವಿರುದ್ಧ ಮಾಜಿ ಕಾರು ಚಾಲಕ ದೂರು ದಾಖಲಿಸಿದ್ಯಾಕೆ?