Publish Date: Sat, 26 May 2018 (16:37 IST)
Updated Date: Sat, 26 May 2018 (16:38 IST)
ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಜೈಲು ಪಾಲಾಗಿದ್ದ ಅರೋಪಿ ಸಂತ್ರಸ್ತ ತಾಯಿ ಹಾಗೂ ಸಾಕ್ಷ್ಯ ಧಾರರಿಗೆ ಧಮ್ಕಿ ಹಾಕಿರುವ ಘಟನೆ ಆನೇಕಲ್ ನ ಚೂಡೇನಹಳ್ಳಿ ಯಲ್ಲಿ ನಡೆದಿದೆ.
ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೂಡನಹಳ್ಳಿಯಲ್ಲಿ ಆಗಸ್ಟ್ 24, 2017 ರಂದು ಮನೆಯ ಮುಂದೆ ಅಟವಾಡ್ತಿದ್ದ 10 ವರ್ಷದ ಬಾಲಕಿ ಯನ್ನ 70 ವರ್ಷದ ನಾಗಪ್ಪ ಎಂಬ ಕಾಮುಕ ಪುಸಲಾಯಿಸಿ ಬಾಲಕಿ ಯನ್ನ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಅರೋಪದ ಮೇಲೆ ಕಾಮುಕ ನಾಗಪ್ಪ ನನ್ನ ಬಂಧಿಸಿ ಜೈಲು ಪಾಲು ಮಾಡಿದ್ದರು ..ಅದರೆ ಇತ್ತೀಚೆಗೆ ಬೇಲ್ ಮೇಲೆ ಹೊರಗಡೆ ಬಂದಿದ್ದ ನಾಗಪ್ಪ ಮತ್ತು ಅವರ ಕುಟುಂಬದವರು ಸಾಕ್ಷ್ಯ ಹೇಳಿದ್ದ ಮುನಿರತ್ನಮ್ಮ ಹಾಗೂ ಗೌರಮ್ಮ ಎಂಬುವವರಿಗೆ ಪ್ರತಿ ದಿನ ಅವಾಚ್ಯ ಶಬ್ದಗಳಿಂದ ಬೈಯ್ದು ಧಮ್ಕಿ ಹಾಕಿದ್ದಾರೆ .ಇದರಿಂದ ಪ್ರಕರಣ ಮತ್ತೆ ಪೊಲೀಸ್ ಠಾಣೆ ಮೇಟ್ಟಿಲೇರಿದೆ.
ಅತ್ಯಾಚಾರವೆಸಗಿದ ಅರೋಪಿ ಕಾಮುಕ ನಾಗಪ್ಪ ನಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ತಾಯಿ ಮತ್ತು ಸಾಕ್ಷ್ಯದಾರರು ಮೂರು ದಿನಗಳ ಹಿಂದೆಯೇ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು ಇನ್ನು ಅಪರಾಧಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲ್ಲದೆ ಸಂತ್ರಸ್ತರಿಗೆ ಯಲ್ಲಿಯೂ ನ್ಯಾಯ ಸಿಗದಂತೆ ಆಗಿದೆ ಇನ್ನು ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಸ್ಕೂಲಿಗೆ ಹೋಗಲು ಸಹ ಹೆದರಿ ಕುರಿಯನ್ನು ಕಾಯುವುದಕ್ಕೆ ಹೋಗುತ್ತಿದ್ದಾಳೆ. ಇಂತಹ ಸ್ಥಿತಿಗೆ ತಂದ ಕ್ರೂರಿಗಳಿಗೆ ಗಲ್ಲು ಶಿಕ್ಷೆಯಾಗಲೇ ಬೇಕು ಎನ್ನುವುದು ಸಂತ್ರಸ್ತ ಕುಟುಂಬದ ಒತ್ತಾಯ ಇನ್ನಾದರೂ ಪೋಲಿಸ್ ಇಲಾಖೆಯವರು ಇವರಿಗೆ ನ್ಯಾಯ ದೊರಕಿಸಿ ಕೊಟ್ಟು ಆ ಬಾಲಕಿ ಗ್ರಾಮದಲ್ಲಿ ಧೈರ್ಯದಿಂದ ಒಡಾಡುವಂತೆ ಮಾಡಬೇಕೆಂದು ಇಲ್ಲಿನ ಗ್ರಾಮಸ್ಥರ ಒತ್ತಾಯಿಸಿದ್ದಾರೆ.