Select Your Language

Notifications

webdunia
webdunia
webdunia
webdunia

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಸರಾಂ ಬಾಪು ವಿರುದ್ಧ ತೀರ್ಪು ಪ್ರಕಟ

ಅಸರಾಂ ಬಾಪು
ನವದೆಹಲಿ , ಬುಧವಾರ, 25 ಏಪ್ರಿಲ್ 2018 (14:23 IST)
ನವದೆಹಲಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪು ದೋಷಿ ಎಂದು ಜೋಧ್ ಪುರ ನ್ಯಾಯಾಲಯ ಘೋಷಿಸಿದೆ.

2013 ರಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಅಸರಾಂ ಬಾಪು ಮೇಲೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ವರ್ಷಗಳಿಂದ ಬಾಪು ಜೈಲು ವಾಸ ಅನುಭವಿಸುತ್ತಿದ್ದಾನೆ.

ತನ್ನ ಆಶ್ರಮದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಾಪುವನ್ನು 2013 ರ ಸೆಪ್ಟೆಂಬರ್ ನಲ್ಲಿ ಬಂಧಿಸಲಾಗಿತ್ತು. ಇದೀಗ ಈತನನ್ನು ದೋಷಿ ಎಂದು ಪ್ರಕಟಿಸಿರುವ ನ್ಯಾಯಾಲಯ ಆತನಿಗೆ ಸಹಕರಿಸಿದವರಿಗೂ ಶಿಕ್ಷೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ಧನ ರೆಡ್ಡಿ ಸ್ಟಾರ್ ನಮ್ಮ ಪ್ರಚಾರಕರಲ್ಲ: ಬಿಜೆಪಿ