Publish Date: Sat, 21 Apr 2018 (09:36 IST)
Updated Date: Sat, 21 Apr 2018 (09:43 IST)
ನವದೆಹಲಿ: ಬೇಸಿಗೆ ರಜಾ.. ಮಜಾ ಮಾಡಲೆಂದು ಕಡಲ ತೀರಕ್ಕೆ ಹೋಗುವ ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಸ್ವಲ್ಪ ತಡೆದುಕೊಳ್ಳಿ.
ಇಂದು ಸಮುದ್ರ ಕಿನಾರೆಗೆ ಹೋಗದಿರುವುದೇ ಲೇಸು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಕಡಲ ತೀರದಲ್ಲಿ ದೊಡ್ಡ ಅಲೆಗಳು ಏಳುವ ಸಂಭವವಿರುವುದರಿಂದ ಕಡಲ ತೀರಕ್ಕೆ ಹೋಗದಿರುವುದು ಉತ್ತಮ ಎಂದು ಹವಾಮಾನ ಇಲಾಖೆ ಹೇಳಿದೆ.
ಹೀಗಾಗಿ ಮೀನುಗಾರರೂ ಸಮುದ್ರಕ್ಕಿಳಿಯುವುದು ಬೇಡ ಎಂದು ಎಚ್ಚರಿಕೆ ನೀಡಲಾಗಿದೆ. ಕೇರಳ, ಪುದುಚೇರಿ, ಲಕ್ಷದ್ವೀಪ ಮುಂತಾದೆಡೆ ಕರಾವಳಿ ತೀರದಲ್ಲಿ ದೊಡ್ಡ ಗಾತ್ರದ ಅಲೆಗಳು ಕೆಲವು ಕ್ಷಣಗಳವರೆಗೆ ಏಳಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.